ಸುದ್ದಿ 

ಆನೇಕಲ್‌ನಲ್ಲಿ ದಿಟ್ಟ ಅಪಹರಣ ಮತ್ತು ಬೆದರಿಕೆ ಪ್ರಕರಣ: ಜಮೀನಿನ ದಾಖಲೆಗಾಗಿ ವ್ಯಕ್ತಿಗೆ ಬಂದೂಕು ತೋರಿಸಿ ಸಹಿ ಬಲವಂತ!

Taluknewsmedia.com

ಆನೇಕಲ್, ಜುಲೈ 8 (2025): ಆನೇಕಲ್‌ನಲ್ಲಿ ದಿನದ ಬೆಳಿಗ್ಗೆ ಸಾಮಾನ್ಯ ಕಾರ್ಯವ್ಯಾಪಾರಕ್ಕಾಗಿ ಹೋದ ವ್ಯಕ್ತಿಯೊಬ್ಬನನ್ನು ಮಧ್ಯಾಹ್ನದ ವೇಳೆಗೆ ಅಪಹರಣ ಮಾಡಲಾಗಿದ್ದು, ಸಾಯಿಸುವ ಬೆದರಿಕೆ ನೀಡಿ ಜಮೀನಿನ ದಾಖಲೆಗಳಿಗೆ ಸಹಿ ಹಾಕಿಸಲು ಯತ್ನಿಸಿದ ಗಂಭೀರ ಘಟನೆ ಬೆಳಕಿಗೆ ಬಂದಿದೆ.

ಶ್ರೀ ಶ್ರೀನಿಧಿ ಯವರು ವಾಬಸಂದ್ರ ಗ್ರಾಮದ ನಿವಾಸಿ, ಅವರು ನೀಡಿದ ಹೇಳಿಕೆಯ ಪ್ರಕಾರ — ದಿನಾಂಕ 04/07/2025 ರಂದು ಬೆಳಿಗ್ಗೆ 11:30ರ ಸುಮಾರಿಗೆ ತನ್ನ ಪತ್ನಿಯನ್ನು ಚುಂಚಘಟ್ಟದಲ್ಲಿ ಬಿಟ್ಟ ನಂತರ ಆನೇಕಲ್ ಸಿವಿಲ್ ಕೋರ್ಟ್ ಬಳಿ ವಕೀಲರನ್ನು ಭೇಟಿಯಾಗಲು ಹೋಗಿದ್ದರು. ಮಧ್ಯಾಹ್ನ 1:15ರ ಸುಮಾರಿಗೆ ಕೋರ್ಟ್ ಆವರಣದ ಬಳಿ ತಮ್ಮ ಕಾರಿಗೆ ಹಿಂತಿರುಗುತ್ತಿದ್ದಾಗ, ಸಿದ್ತಸ್ವಾರ್ಫಿಯೋ ಕಾರಿನಲ್ಲಿದ್ದ ನಾಲ್ಕು ಮಂದಿ ವ್ಯಕ್ತಿಗಳು ಅವರ ಮೇಲೆ ದಾಳಿ ಮಾಡಿ ಕಾರಿನೊಳಕ್ಕೆ ಬಲವಂತದಿಂದ ನೂಕಿದರು.

ಅವರು ಕಣ್ಣಿಗೆ ಬಟ್ಟೆ ಕಟ್ಟಿದ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ, ಭಯಾನಕ ಬೆದರಿಕೆ ನೀಡಿದ್ದಾರೆ. ಆರೋಪಿಗಳು ಶ್ರೀನಿಧಿಯನ್ನು ಅನಾಮಿಕ ಬಡಾವಣೆಗೆ ಕರೆದುಕೊಂಡು ಹೋಗಿ, “ನೀವು ನಿಮ್ಮ ಜಮೀನನ್ನು ಪದ್ಮನಾಭರಾವ್ ಎಂಬುವವರಿಗೆ ರಿಜಿಸ್ಟರ್ ಮಾಡಿಸಬೇಕು” ಎಂದು ಬಂದೂಕು ತೋರಿಸಿ ಬಲವಂತ ಮಾಡಿದ್ದಾರೆ. ಅವರಿಂದ 5-6 ಮಾತ್ರೆಗಳನ್ನು ನುಂಗಿಸುವಂತೆ ಮಾಡಿ ಬಳಿಕ ಅವರನ್ನು ಸರ್ಜಾಪುರ ಸಬ್-ರಿಜಿಸ್ಟ್ರಾರ್ ಕಚೇರಿಗೆ ಕರೆದುಕೊಂಡು ಹೋಗಲಾಗಿದೆ.

ಅಲ್ಲಿಯೂ ಸಹ ಶಂಕಿತರಾದ ಪದ್ಮನಾಭರಾವ್, ರಾಮಪ್ರಸಾದ್, ಸುಗುಣ, ಲತಾ, ಹಾಗೂ ಸುಮ ಎಂಬುವರು ಜಮೀನಿನ ದಾಖಲೆಗಳಿಗೆ ಸಹಿ ಹಾಕಲು ಒತ್ತಡ ಹೇರಿದರೆಂಬುದಾಗಿ ಹೇಳಲಾಗಿದೆ. ಭಯಭೀತರಾದ ಶ್ರೀನಿಧಿ ಅವರು ಓಡಿಹೋಗಿ ಕ್ಲರ್ಕ್ ರೂಮ್‌ಗೆ ತಲುಪಿದ ಬಳಿಕ ತಕ್ಷಣವೇ ಸರ್ಜಾಪುರ ಪೊಲೀಸರಿಗೆ ದೂರವಿಡಿಸಿದ್ದಾರೆ. ಸದ್ಯ ಪ್ರಕರಣದ ತನಿಖೆ ಆರಂಭವಾಗಿದ್ದು, ಅಪಹರಣ, ದಬ್ಬಾಳಿಕೆ, ಹಲ್ಲೆ ಮತ್ತು ಕಾನೂನುಬಾಹಿರ ದಾಖಲೆ ಪ್ರಕ್ರಿಯೆಯ ಆರೋಪಗಳನ್ನು ಪೊಲೀಸರು ಪರಿಗಣಿಸಿದ್ದಾರೆ.

ಶ್ರೀನಿಧಿಯು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯಕೀಯ ಚಿಕಿತ್ಸೆ ಪಡೆದುಕೊಂಡಿದ್ದಾರೆ.

Related posts