ಸುದ್ದಿ 

ಅಂಕಿತ್ ಚಾಲನೆ ಮಾಡಿದ ಕಾರು ಅಪಘಾತಕ್ಕೆ ಗುರಿ – ಯಾರಿಗೂ ಗಾಯವಾಗಿಲ್ಲ

Taluknewsmedia.com

ಬೆಂಗಳೂರು, ಜುಲೈ 9 2025:


ಯಲಹಂಕ ಬಳಿಯ ಅವಲಹಳ್ಳಿ ನಿವಾಸಿಯಾಗಿರುವ ಬಾಬು ಅವರ ಸ್ವಾಧೀನದಲ್ಲಿರುವ KA50 MD9706 ಸಂಖ್ಯೆಯ ಸ್ವಿಫ್ಟ್ ಕಾರು ಜೂನ್ 3ರ ರಾತ್ರಿ ಅಪಘಾತಕ್ಕೊಳಗಾದ ಘಟನೆ ವರದಿಯಾಗಿದೆ. ಘಟನೆ ಅರಕೆರೆ-ಚಿಕ್ಕನಹಳ್ಳಿ ರಸ್ತೆಯ ಬಳಿ ನಡೆದಿದೆ.

ಅದರ ಪ್ರಕಾರ, ಕಾರನ್ನು ಸ್ನೇಹಿತ ವಿವೇಕ್ ಮೂಲಕ ಅಂಕಿತ್ ಎಂಬ ಯುವಕ ಬಳಸಿ ಹಾಸ್ಟೆಲ್‌ಗೆ ಹಿಂದಿರುಗುತ್ತಿದ್ದ ವೇಳೆ, ರಸ್ತೆ ಮೇಲೆ ನಾಯಿ ಅಡ್ಡವಾಗಿ ಬಂದಿದ್ದು, ಅದನ್ನು ತಪ್ಪಿಸಲು ಕಾರು ಬಲಕ್ಕೆ ತಿರುಗಿಸಿದಾಗ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬ ಹಾಗೂ ಖಾಸಗಿ ಕಾಂಪೌಂಡ್‌ಗೆ ಡಿಕ್ಕಿ ಹೊಡೆದು ಜಖಂಗೊಂಡಿದೆ.

ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಕಾರು ಮಾಲೀಕರಾದ ಬಾಬು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು. ಕಾರಿನಲ್ಲಿದ್ದವರಿಗೆ ಯಾವುದೇ ಗಾಯವಾಗಿಲ್ಲ ಎಂದು ದೃಢಪಟ್ಟಿದೆ. ಅಪಘಾತದ ಹೊಣೆಗಾರನಾಗಿ ಅಂಕಿತ್ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ನವೀನ್ ಕುಮಾರ್ ಡಿ ಅವರು ರಾಜನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, FIR ಸಂಖ್ಯೆ 169/2025ರಂತೆ ಪ್ರಕರಣ ದಾಖಲಾಗಿದೆ.

ರಾಜನಕುಂಟೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Related posts