ಸುದ್ದಿ 

ಮಾರಸಂದ್ರ ಬಳಿ ಬೈಕ್ ಅಪಘಾತ: ಇಬ್ಬರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ

Taluknewsmedia.com

ಬೆಂಗಳೂರು, ಜೂನ್ 9– 2025
ಮಾರಸಂದ್ರ ಗ್ರಾಮದ ಬಳಿ ನಡೆದ ಬೈಕ್ ಅಪಘಾತದಲ್ಲಿ ಇಬ್ಬರು ಯುವಕರು ಗಾಯಗೊಂಡಿರುವ ಘಟನೆ ಜೂನ್ 7ರ ಸಂಜೆ ನಡೆದಿದೆ.

ರಂಗಸ್ವಾಮಿ ಅವರು ನೀಡಿದ ದೂರಿನ ಪ್ರಕಾರ, ಅವರು ತಮ್ಮ ತಮ್ಮ ರಾಜೇಶ್ ರವರೊಂದಿಗೆ KA-05-HQ-4490 ನಂಬರ್ ನ ಮೋಟಾರ್ ಸೈಕಲ್ ನಲ್ಲಿ ತಮ್ಮ ಖಾಸಗಿ ಕೆಲಸಕ್ಕಾಗಿ ಹೊರಟಿದ್ದರು. ರಾತ್ರಿ ಸುಮಾರು 8:00 ಗಂಟೆಗೆ, ದೊಡ್ಡಬಳ್ಳಾಪುರ – ಬೆಂಗಳೂರು ಹೆದ್ದಾರಿಯ ಮಾರಸಂದ್ರ ಗ್ರಾಮದ ಯು-ಟರ್ನ್ ಡಾಬಾ ಸಮೀಪ, ರಾಜೇಶ್ ಅವರು ಮೋಟಾರ್ ಸೈಕಲ್ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸುತ್ತಿದ್ದ ಸಂದರ್ಭದಲ್ಲಿ ಬೈಕ್ ಸ್ಕಿಡ್ ಆಗಿದ್ದು, ಇಬ್ಬರೂ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ.

ಈ ಅಪಘಾತದಲ್ಲಿ, ರಂಗಸ್ವಾಮಿ ಅವರು ಎಡಕೈ ಮತ್ತು ಬಲಕಾಲಿಗೆ ಗಾಯಗೊಂಡಿದ್ದು, ರಾಜೇಶ್ ಅವರಿಗೆ ತಲೆ ಹಾಗೂ ಕೈ-ಕಾಲುಗಳಿಗೆ ಗಂಭೀರ ರಕ್ತಗಾಯಗಳಾಗಿವೆ. ಸ್ಥಳೀಯರು ಅವರನ್ನು ಸ್ಥಳೀಯ ವೆಲ್ ವರ್ಥ್ ಆಸ್ಪತ್ರೆಗೆ ತಲುಪಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ, ಹೆಚ್ಚಿನ ಚಿಕಿತ್ಸೆಗೆ ರಾಜೇಶ್ ಅವರನ್ನು ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂಬಂಧ ರಾಜನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪ್ರಕರಣ ಸಂಖ್ಯೆ 171/2025ರಲ್ಲಿ 281, 125, 202, 304(A) ಸೆಕ್ಷನ್ ಅಡಿಯಲ್ಲಿ ತನಿಖೆ ಮುಂದುವರೆದಿದೆ.

Related posts