ಸುದ್ದಿ 

ಚೊಕ್ಕನಹಳ್ಳಿಯಲ್ಲಿ ಜಮೀನು ಹಗರಣ: ಸುಳ್ಳು ದಾಖಲೆಗಳಿಂದ ಸ್ವತ್ತು ಲಪಟಾಯಿಸಲು ಯತ್ನ!

Taluknewsmedia.com

ಬೆಂಗಳೂರು, ಜೂನ್ 09 –2025
ಬೆಂಗಳೂರು ಜಿಲ್ಲೆಯ ಹೆಸರಘಟ್ಟ ಹೋಬಳಿಯ ಚೊಕ್ಕನಹಳ್ಳಿ ಗ್ರಾಮದಲ್ಲಿ ಜಮೀನಿನ ಮೇಲೆ ಹಕ್ಕು ಸ್ಥಾಪಿಸಲು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಲಪಟಾಯಿಸಲು ಯತ್ನಿಸಿರುವ ಪ್ರಕರಣವೊಂದು ವರದಿಯಾಗಿದೆ.

ನಾಗರಾಜು ಅವರ ಪ್ರಕಾರ, ಅವರ ಸ್ವಂತ ಜಮೀನಾದ ಸರ್ವೆ ನಂ.90 ಮತ್ತು 95 ರ ಮೇಲೆ ಶ್ರೀಮತಿ ಕೆಂಪಮ್ಮ ಮತ್ತು ಶ್ರೀ ವೀರಣ್ಣ ಕೆ. ರವರು ಸುಳ್ಳು ದಾಖಲೆಗಳನ್ನು ತಯಾರಿಸಿ, ದಿನಾಂಕ 14/07/2022 ರಂದು ನಕಲಿ ಶುದ್ದ ಕ್ರಯಪತ್ರವನ್ನು ರಜಿಸ್ಟರ್ ಮಾಡಿಕೊಂಡಿದ್ದಾರೆ. ಈ ಮೂಲಕ ಇಬ್ಬರೂ ಕೂಡಾ ಜಮೀನಿನ ಮೇಲೆ ಅಕ್ರಮವಾಗಿ ಹಕ್ಕು ಸ್ಥಾಪಿಸಲು ಪ್ರಯತ್ನಿಸಿದ್ದಾರೆ.

ದೂರುದಾರರು ಈ ಬಗ್ಗೆ ನ್ಯಾಯಾಲಯದ ಪ್ರಾಥಮಿಕ ಅರ್ಜಿ (PCR) ದಾಖಲಿಸಿದ್ದಿದ್ದು, ಅದನ್ನು ಗಮನದಲ್ಲಿ ಇಟ್ಟುಕೊಂಡು ದಿನಾಂಕ 09/06/2025 ರಂದು ಸಂಜೆ 5 ಗಂಟೆಗೆ ನ್ಯಾಯಾಲಯದ ಆದೇಶದ ಮೇಲೆ ರಾಜನಕುಂಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಈ ಪ್ರಕರಣವನ್ನು ಬೆಂಗಳೂರು ನಗರ ಜಿಲ್ಲಾ ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಂಡಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳು 25, 420, 419, 465, 466, 467, 468, 471 RW 34 IPC ಅಡಿಯಲ್ಲಿ ಪ್ರಕರಣ ಸಂಖ್ಯೆ 173/2025 ರಂತೆ ದಾಖಲಿಸಲಾಗಿದೆ.

Related posts