ಸುದ್ದಿ 

ವಾರಂಟ್ ಆರೋಪಿಗೆ ಪಟ್ಟಣದಲ್ಲೇ ಬಲೆ – ವಿದ್ಯಾರಣ್ಯಪುರ ಪೊಲೀಸರ ಕಾರ್ಯಾಚರಣೆ ಯಶಸ್ವಿ

Taluknewsmedia.com

ಬೆಂಗಳೂರು, ಜುಲೈ 10, 2025:


ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ವಿದ್ಯಾರಣ್ಯಪುರ ಪೊಲೀಸರು ಇಂದು ಮುಂಜಾನೆ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಭರತ್ ಪಿ ಬಿನ್ ಪರಶುರಾಮ್ (33 ವರ್ಷ), ನಿವಾಸಿ – ನಂ. 64, 1ನೇ ಮೈನ್, ಸೋಮಣ ಗಾರ್ಡನ್, ವಿದ್ಯಾರಣ್ಯಪುರ, ಬೆಂಗಳೂರು ಎಂದು ಗುರುತಿಸಲಾಗಿದೆ.

ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ವಾರಂಟ್ ಜಾರಿ ವಿಭಾಗದ ಸಿಬ್ಬಂದಿ ಕಳೆದ ಒಂದೂವರೆ ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದು, ಅಧಿಕಾರಿ ಮತ್ತು ಹೆಡ್ ಕಾನ್ಸ್‌ಟೇಬಲ್ ಪ್ರಭಾಕರ್ ಸಾಳಂಕಿ (ಎಚ್.ಸಿ 11637) ಅವರೊಂದಿಗೆ ದಸ್ತಗಿರಿ ವಾರಂಟ್ ಜಾರಿಗೆ ನಿಯೋಜಿಸಲಾಗಿತ್ತು.

ಈ ದಿನ ಬೆಳಿಗ್ಗೆ ಸುಮಾರು 9:30 ಗಂಟೆಗೆ ಬಾತ್ಮೀದಾರರಿಂದ ಭರತ್ ತನ್ನ ಮನೆಯಲ್ಲಿಯೇ ಇರುವುದು ಎಂಬ ಖಚಿತ ಮಾಹಿತಿ ಬಂದಿದ್ದು, ಅಧಿಕಾರಿಗಳು 10:00 ಗಂಟೆಗೆ ಸ್ಥಳಕ್ಕಿಳಿದು, ಭರತ್‌ರನ್ನು ಬಂಧಿಸಿದರು. ನಂತರ ಆರೋಪಿಯನ್ನು 11:00 ಗಂಟೆಗೆ ಠಾಣೆಗೆ ಕರೆತರಲಾಯಿತು ಮತ್ತು ಪಿಎಸ್‌ಐ ಶ್ರೀ ಚಂದ್ರಶೇಖರ್ ಆರ್ ಅವರ ಮುಂದಿಲ್ಲಿ ಹಾಜರುಪಡಿಸಲಾಯಿತು.

ಭರತ್ ಪಿ ವಿರುದ್ಧ 7ನೇ ಎ.ಸಿ.ಎಂ.ಎಂ ನ್ಯಾಯಾಲಯದಲ್ಲಿ ಸಿ.ಸಿ ನಂ. 7201/2021 ಪ್ರಕರಣವಿದ್ದು, ಇತ್ತೀಚೆಗಿನ ನ್ಯಾಯಾಲಯದ ಆದೇಶದಂತೆ ದಸ್ತಗಿರಿ ವಾರಂಟ್ ಜಾರಿಗೆ ತೀರ್ಮಾನಿಸಲಾಗಿತ್ತು. ಅನೇಕ ಬಾರಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಈ ಬಾರಿ ಪೊಲೀಸರು ವಿಳಾಸದ ಮೇಲೆಲೇ ಬೇಟೆಯಾಡಿದ್ದಾರೆ.

ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಕಾರ್ಯಾಚರಣೆ ಪ್ರಕರಣದ ನಿರ್ವಹಣೆಯಲ್ಲಿ ಮಾದರಿಯಾಗಿದ್ದು, ಪೊಲೀಸ್ ಇಲಾಖೆಯ ಪ್ರಮಾಣಿಕತೆಯ ಸಾಕ್ಷ್ಯವಾಗಿದೆ.

Related posts