ಸುದ್ದಿ 

ಪತ್ನಿ ಹಾಗೂ ಮಕ್ಕಳ ಮೇಲೆ ನಿರಂತರ ಹಲ್ಲೆ – ಗಂಡನ ವಿರುದ್ಧ ಗಂಭೀರ ಎಫ್‌ಐಆರ್ ದಾಖಲು

Taluknewsmedia.com

ದೊಡ್ಡಬಳ್ಳಾಪುರ, ಜುಲೈ 12:2025


ದೊಡ್ಡಬಳ್ಳಾಪುರ ತಾಲ್ಲೂಕಿನ ಕಸ್ತೂರು ಗ್ರಾಮದ ಮಹಿಳೆ ತನ್ನ ಗಂಡನ ವಿರುದ್ಧ ನಿರಂತರ ಮಾನಸಿಕ ಹಾಗೂ ದೈಹಿಕ ಹಲ್ಲೆ, ಅಕ್ರಮ ಸಂಬಂಧ ಹಾಗೂ ಕೊಲೆ ಬೆದರಿಕೆ ನೀಡಿದ ಪ್ರಕರಣವಾಗಿ ರಾಜನಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗಂಡನ ವಿರುದ್ದ BNS ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರೆಯು ತನ್ನ ಗಂಡ ಮೂರ್ತಿಯೊಂದಿಗೆ ಮದುವೆಯಾಗಿದ್ದು, ಅವರಿಗೆ ಅಮೃತ (14 ವರ್ಷ) ಹಾಗೂ ಆಕಾಂಶ (11 ವರ್ಷ) ಎಂಬ ಇಬ್ಬರು ಪುತ್ರಿಯರಿದ್ದಾರೆ. ಮದುವೆಯಾದ ಮೊದಲ ಮೂರು ವರ್ಷಗಳವರೆಗೆ ಸಂಸಾರ ಸುಗಮವಾಗಿದ್ದರೂ ನಂತರ ಮೂರ್ತಿ ದಿನವೂ ಮದ್ಯಪಾನ ಮಾಡಿ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಪತ್ನಿಗೆ ಹಲ್ಲೆ ಮಾಡುತ್ತಿದ್ದ.

ಅಲ್ಲದೆ, ಮೂರ್ತಿ “ಅಮೃತ” ಎಂಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿಕೊಂಡು ನಂತರ ಆಕೆಯನ್ನೇ ಮದುವೆಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಪತ್ನಿ ಪ್ರಶ್ನಿಸಿದಾಗ, 2025ರ ಜೂನ್ 28ರಂದು ಬೆಳಗ್ಗೆ 9 ಗಂಟೆಗೆ ಪತ್ನಿಯ ತಲೆಯ ಕೂದಲು ಎಳೆದು, ಕೈಯಿಂದ ಹೊಡೆದು, ಕಾಲಿನಿಂದ ಒದ್ದಿದ್ದು, ಮರುದಿನವೂ ಮಕ್ಕಳ ಮುಂದೆ ಅವಳಿಗೆ ಹಲ್ಲೆ ಮಾಡಿ, ಚಿಕ್ಕ ಮಗಳನ್ನು ಎತ್ತಿ ಬಿಸಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮೂರು ಮಂದಿಗೆ ಜೀವ ಬೆದರಿಕೆ ಹಾಕಿರುವ ಮೂರ್ತಿ, “ನಿಮ್ಮನ್ನು ಬಿಟ್ಟು ಬಿಡುವುದಿಲ್ಲ, ಸಾಯಿಸದೆ ಬಿಡಲ್ಲ” ಎಂದು ಹಲ್ಲೆ ನಡೆಸಿದ್ದಾನೆ. ಬಾಲಕಿಯರಿಗೂ ಹಲ್ಲೆ ನಡೆಸಿ, ಅವು ತಿನ್ನುತ್ತಿದ್ದ ಊಟವನ್ನು ಬಿಸಿ ಹಾಕಿರುವುದಾಗಿ ದೂರಿನಲ್ಲಿ ವಿವರಿಸಲಾಗಿದೆ.

ಈ ಘಟನೆಯ ನಂತರ ಮಹಿಳೆ ತನ್ನ ಮಕ್ಕಳೊಂದಿಗೆ ತವರು ಮನೆಗೆ ಸ್ಥಳಾಂತರವಾಗಿ, ಜೀವ ಭಯದಿಂದ ದೂರು ದಾಖಲಿಸಿದ್ದಾರೆ.

ಈ ಕುರಿತಂತೆ ರಾಜನಕುಂಟೆ ಪೊಲೀಸ್ ಠಾಣೆಯಲ್ಲಿ FIR ಸಂಖ್ಯೆ 200/2025 ರಿಂದ ಪ್ರಕರಣ ದಾಖಲಾಗಿದ್ದು, BNS ಕಲಂಗಳು 85, 115(2), 352, 351(2), 351(3) ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Related posts