ಮದ್ಯಪಾನ ಮತ್ತಿಂದ ಪತ್ನಿಗೆ ಹಿಂಸೆ – ಪತಿಯ ವಿರುದ್ಧ ಯಲಹಂಕ ಉಪನಗರ ಪೊಲೀಸರಿಗೆ ದೂರು
ಬೆಂಗಳೂರು, ಜುಲೈ 14:2025
ನಗರದ ನಿವಾಸಿಯಾಗಿರುವ ಮಂಜುಳ ಹೆಚ್ ಎಂಬುವವರು ತಮ್ಮ ಪತಿ ಸೋಮಣ್ಣ ವಿರುದ್ಧ ಗಂಭೀರ ಆರೋಪ ಹೊರಿಸಿ ಯಲಹಂಕ ಉಪನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ದೂರುದಾರರ ಪ್ರಕಾರ, ಮಂಜುಳ ಅವರು ಸೋಮಣ್ಣ ಅವರೊಂದಿಗೆ ಪ್ರೇಮ ವಿವಾಹ ಮಾಡಿಕೊಂಡು ಕಳೆದ ಐದು ವರ್ಷಗಳಿಂದ ಸಂಸಾರ ನಡೆಸುತ್ತಿದ್ದು, ಈ ಹಿಂದೆ ಸಹಜ ಜೀವನ ಸಾಗುತ್ತಿದ್ದರೂ, ಕಳೆದ ಆರು ತಿಂಗಳಿನಿಂದ ಪತಿ ಸೋಮಣ್ಣ ಅವರು ಕೆಲಸ ತೊರೆದು ನಿತ್ಯ ಮದ್ಯಪಾನ ಮಾಡುವ ಅಭ್ಯಾಸಕ್ಕೆ ಒಳಗಾಗಿದ್ದಾರೆ.
ಮದ್ಯಪಾನ ಮಾಡಿರುವ ನಂತರ ಮನೆಗೆ ಬಂದು ಪತ್ನಿ ಮತ್ತು ಮಗಳಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು, ಜೂನ್ 3ರಂದು ಈ ಸಂಬಂಧ ಪತ್ನಿ ಮಂಜುಳ ಅವರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಸೋಮಣ್ಣನನ್ನು ಕರೆಸಿ ಎಚ್ಚರಿಕೆ ನೀಡಿದರೂ ಪರಿಸ್ಥಿತಿ ಸುಧಾರಣೆಗೊಳ್ಳದೆ ಮತ್ತೆ ಅದೇ ರೀತಿಯ ವರ್ತನೆ ಮುಂದುವರಿದಿದೆ.
ಇತ್ತೀಚೆಗಷ್ಟೇ ಸೋಮಣ್ಣ ತಮ್ಮ ಪತ್ನಿಯ ಮೊಬೈಲ್ ದೂರವಾಣಿ ಯಂತ್ರವನ್ನು ನಾಶಪಡಿಸಿರುವುದಲ್ಲದೆ, “ನಿನ್ನ ಹೆಸರು ಬರೆದಿಟ್ಟು ಸಾಯುತ್ತೇನೆ” ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರುದಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನಲೆಯಲ್ಲಿ ಪತ್ನಿ ಮಂಜುಳ ಅವರು ತಮ್ಮ ಹಾಗೂ ಮಗಳ ಸುರಕ್ಷತಿಗಾಗಿ ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಯಲಹಂಕ ಉಪನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ.

