ಕಾಲೇಜು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ – ಒಬ್ಬನಿಗೆ ತೀವ್ರದಂಡನೆ, ಕಾನೂನು ಕ್ರಮಕ್ಕೆ ಮಹಿಳೆಯರಿಂದ ದೂರು
ಬೆಂಗಳೂರು, ಜುಲೈ 15: 2025
ನಗರದ ಬೋಳ್ಳವಳಿ ಉಪನಗರದಲ್ಲಿ ಯುವತಿಯರ ಮೇಲೆ ಲೈಂಗಿಕ ಕಿರುಕುಳ ನೀಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಯೂಬ್ ಎಂಬ ಯುವಕನು ತನ್ನ ಸ್ನೇಹಿತರೊಂದಿಗೆ ಸೇರಿ ಕಳೆದ ಕೆಲ ದಿನಗಳಿಂದ ಸ್ಥಳೀಯ ಕಾಲೇಜು ವಿದ್ಯಾರ್ಥಿನಿಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ, ಕೆಟ್ಟ ದೃಷ್ಟಿಯಿಂದ ಸನ್ನೆ ಮಾಡುತ್ತಾ ಅವರನ್ನು ಹಿಂಬಾಲಿಸುತ್ತಿದ್ದಾನೆ ಎನ್ನಲಾಗಿದೆ.
ಇಲ್ಲಿಯವರೆಗೆ ಹಲವು ಬಾರಿ ಎಚ್ಚರಿಕೆ ನೀಡಿದರೂ ಕೂಡ ಅಯೂಬ್ ತನ್ನ ವರ್ತನೆ ಬದಲಾಯಿಸಿಲ್ಲ. ದಿನಾಂಕ 12-07-2025 ರಂದು ಸಂಜೆ 5 ರಿಂದ 5.30ರ ಸಮಯದಲ್ಲಿ ಬೋಳ್ಳವಳಿ ಶಾಖೆಯ ಹತ್ತಿರವಿರುವ ಒಂದು ಹೋಟೆಲ್ ನಲ್ಲಿ ತಿಂಡಿ ತಿನ್ನುತ್ತಿದ್ದ ವೇಳೆ, ಅಯೂಬ್ ಮತ್ತೆ ದೂರುದಾರೆಯ ಮುಂದೆ ಕಾಮೆಂಟ್ ಮಾಡಿ, ಕಿರುಕುಳ ನೀಡಿದ್ದಾನೆ.
ಈ ವೇಳೆ, ಆತನ್ನು ಪ್ರಶ್ನಿಸಿದ ವೇಳೆ, ಅವರ ಸ್ನೇಹಿತ ಮನು ತನ್ನ ಆಕ್ರೋಶ ವ್ಯಕ್ತಪಡಿಸಿ ಅಯೂಬ್ ಗೆ ಹೊಡೆದಿದ್ದಾರೆ. ಈ ಹೊಡೆತದಿಂದ ಅಯೂಬ್ ಕುಸಿದು ಬಿದ್ದು, ಕಿವಿಗೆ ಗಾಯವಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾದ ನಂತರ, ಈ ಘಟನೆ ಬಗ್ಗೆ ವಿಚಾರಿಸಲು ಬಂದ ದೂರುದಾರೆಯ ಸ್ನೇಹಿತರ ಮೇಲೆ ಅಯೂಬ್ ತಂಡ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ.
ಈ ಎಲ್ಲ ಘಟನೆಗಳಿಂದ ವಿದ್ಯಾರ್ಥಿಗಳಲ್ಲಿ ಭಯ ಮತ್ತು ಆತಂಕ ಮನೆಮಾಡಿದ್ದು, ಅವರು ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮಹಿಳೆಯರ ಸುರಕ್ಷತೆಗಾಗಿ ಹೆಚ್ಚಿನ ಪೊಲೀಸ್ ಭದ್ರತೆ ನೀಡಲಾಗಿದೆ ಎಂದು ಮಾಹಿತಿ ಲಭಿಸಿದೆ

