ಸುದ್ದಿ 

ಮಾಜಿ ಶಿಕ್ಷಕರ ದೂರು: 1.5 ಲಕ್ಷ ಶಾಲಾ ದಾಖಲೆಗಳನ್ನು ಡೌನ್‌ಲೋಡ್ ಮಾಡಿದ ಆರೋಪ

Taluknewsmedia.com

ಬೆಂಗಳೂರು, ಜುಲೈ 14, 2025:
ನಗರದ ಖಾಸಗಿ ಶಾಲೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದ ಮಾಜಿ ಶಿಕ್ಷಕಯೊಬ್ಬರ ವಿರುದ್ಧ ಶಾಲೆಯ ಮಹತ್ವದ ದಾಖಲೆಗಳನ್ನು ಅಕ್ರಮವಾಗಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.

ವರ್ಷ ಸೆಕ್ಸಿನ ಅವರ ಪ್ರಕಾರ, ಮಾಲತಿ ಅನಂತ ಎಂಬುವರು 06 ಮೇ 2019 ರಿಂದ 29 ಜೂನ್ 2024ರವರೆಗೆ ಇನ್ವೆಂಚರ್ ಅಕಾಡೆಮಿ ಶಾಲೆಯಲ್ಲಿ ಹೆಡ್ ಆಫ್ ಸೈನ್ಸ್ ಹಾಗೂ ಹಾಫ್ ಟೈಮ್ ಟೀಚರ್ ಆಗಿ ಕೆಲಸ ಮಾಡುತ್ತಿದ್ದರು. ಜೂನ್ 2024ರಲ್ಲಿ ಅವರು ಆರೋಗ್ಯ ಹಾಗೂ ವೈಯಕ್ತಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಕೆಲಸಕ್ಕೆ ಹಾಜರಾಗಿಲ್ಲ. ಅವರು ಕೊಟ್ಟಿದ್ದ ರಾಜೀನಾಮೆಯಲ್ಲಿ “ಬೇರೆ ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುವುದಿಲ್ಲ” ಎಂಬುದಾಗಿ ಸ್ಪಷ್ಟಪಡಿಸಿದ್ದರು.

ಆದರೆ ನಂತರದ ದಿನಗಳಲ್ಲಿ ಮಾಲತಿ ಅನಂತ ಅವರು ಬೆಂಗಳೂರು ಸೀಗೆಹಳ್ಳಿಯ ವಾಲಿಸ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಡೆಪ್ಯುಟಿ ಹೆಡ್ ಆಗಿ ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಶಾಲೆಯ ತಾಂತ್ರಿಕ ತಪಾಸಣೆಯು ನಡೆಸಿದ ಸಿಸ್ಟಮ್ ಹಿಸ್ಟರಿ ಪರಿಶೀಲನೆಯಿಂದ 01 ಮೇ 2024 ರಿಂದ 27 ಜೂನ್ 2024ರವರೆಗೆ ಸುಮಾರು 1,50,000 ಫೈಲ್ಗಳನ್ನು ಮಾಲತಿ ಅನಂತ ರವರು ಡೌನ್‌ಲೋಡ್ ಮಾಡಿಕೊಂಡಿರುವುದು ದೃಢಪಟ್ಟಿದೆ.

ಶಾಲಾ ಆಡಳಿತದ ಪ್ರಕಾರ, ಈ ಫೈಲ್‌ಗಳಲ್ಲಿ ಶಾಲೆಯ ಆಂತರಿಕ ದಾಖಲೆಗಳು, ಪಾಠ ಯೋಜನೆಗಳು, ವಿದ್ಯಾರ್ಥಿ ಮಾಹಿತಿಗಳು ಹಾಗೂ ಇತರ ಸಂವೇದನಾಶೀಲ ಡೇಟಾ ಹೊಂದಿದ್ದು, ಇವುಗಳನ್ನು ಕಳ್ಳತನ ಮಾಡುವ ಉದ್ದೇಶದಿಂದಲೇ ಡೌನ್‌ಲೋಡ್ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಈ ಕುರಿತಂತೆ ಶಾಲಾ ಆಡಳಿತವು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಮಾಲತಿ ಅನಂತ ಅವರ ವಿರುದ್ಧ ನಂಬಿಕೆಯ ದ್ರೋಹ ಮತ್ತು ಡೇಟಾ ಕಳವು ಆರೋಪದಡಿ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣದ ತನಿಖೆ ಪ್ರಾರಂಭಿಸಿದ್ದಾರೆ.

Related posts