ಸುದ್ದಿ 

ಚಿನ್ನಾಭರಣ ಕಳ್ಳತನ: ಮನೆ ಬಾಗಿಲು ಮುರಿದು ಲಕ್ಷಾಂತರ ಮೌಲ್ಯದ ಆಭರಣ ಮಿಸ್ಸಿಂಗ್

Taluknewsmedia.com

ಬೆಂಗಳೂರು ಗ್ರಾಮಾಂತರ ಜುಲೈ 16:2025


ವಿಜಯನಗರ ಗ್ರಾಮದಲ್ಲಿ ದಿನಾಂಕ 13-07-2025 ರಂದು ದಿನದ ಬೆಳಗ್ಗೆ ಸಂಭವಿಸಿದ ಕಳ್ಳತನದ ಘಟನೆ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಮನೆ ಮಾಲೀಕರು ಕೆಲಸಕ್ಕೆ ತೆರಳಿದ್ದ ಸಮಯದಲ್ಲಿ ದುಷ್ಕರ್ಮಿಗಳು ಮನೆ ಬಾಗಿಲು ಮುರಿದು ಒಳನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದಾರೆ.

ರಾಜಮ್ಮ ಅವರು ನೀಡಿದ ಮಾಹಿತಿಯ ಪ್ರಕಾರ, ಅವರು ಬೆಳಗ್ಗೆ 07:15 ಕ್ಕೆ ಕೆಲಸಕ್ಕೆ ಹೋಗಿದ್ದಾಗ ಮನೆಗೆ ತಾಯಿ ಅಕ್ಕಯಮ್ಮ, ಅಜ್ಜಿ ಮುನಿಯಮ್ಮ ಇದ್ದರು. ಮಧ್ಯಾಹ್ನ 02:20ರ ವೇಳೆಗೆ ಮನೆಗಿನ ಎಲ್ಲರೂ ಊರಿನ ಸಂಬಂಧಿಕರ ಜನ್ಮದಿನ ಪಾರ್ಟಿಗೆ ಹೋಗಿದ್ದರು. ಸಂಜೆ 04:00ಕ್ಕೆ ಮನೆಗೆ ವಾಪಸು ಬಂದಾಗ, ಬಾಗಿಲಿನ ಚಿಲಕ ಮುರಿಯಲ್ಪಟ್ಟ ಸ್ಥಿತಿಯಲ್ಲಿ ಕಂಡುಬಂದಿತು.

ಮನೆ ಒಳಗೆ ಪರಿಶೀಲನೆ ನಡೆಸಿದಾಗ, ಬೀರುವಿನ ಲಾಕರ್ ಮುರಿಯಲಾಗಿದ್ದು, ಒಳಗೆ ಇಟ್ಟಿದ್ದ ಬಹುಮೌಲ್ಯದ ಚಿನ್ನಾಭರಣಗಳು ಕಳವಾಗಿದ್ದವು. ಕಳ್ಳರು ಕದ್ದ್ದುಕೊಂಡು ಹೋದ ವಸ್ತುಗಳ ವಿವರ ಹೀಗಿದೆ:

11 ಗ್ರಾಂ ಚಿನ್ನದ ಒಲೆಯ ಜೋಡಿ ಜುಮುಕಿ

7 ಗ್ರಾಂ ಚಿನ್ನದ ಚಿಕ್ಕ ಜುಮುಕಿ

3 ಗ್ರಾಂ ಚಿನ್ನದ ಓಟಿ

1.34 ಗ್ರಾಂ ಜಾಕಿ ಲಾಕೆಟ್

15 ಗ್ರಾಂ ಚಿನ್ನದ ಉಂಗುರ

ಬೆಳ್ಳಿಯ ಲಾಂಗ್ ಚೈನ್ (ಚಿನ್ನದ ಲೇಪನದೊಂದಿಗೆ)

ಬೆಳ್ಳಿಯ ಮುಖವಾಡ

2 ಬೆಳ್ಳಿಯ ಕಾಯಿನ್ (ಒಂದುಕಡೆ ತೂಕ 2 ಗ್ರಾಂ)

₹7,000 ನಗದು ಹಣ

ಅಕ್ಕಪಕ್ಕದ ಸ್ಥಳಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಶಂಕಿತ ವ್ಯಕ್ತಿಗಳ ಬಗ್ಗೆ ಕುಟುಂಬದವರು ಪತ್ತೆ ಹಚ್ಚುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಈ ಕುರಿತು ರಾಜನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣವು FIR ಸಂಖ್ಯೆ 204/2025 ಅಡಿಯಲ್ಲಿ 305 BNS ಸೆಕ್ಷನ್ ಅಡಿಯಲ್ಲಿ ದಾಖಲಾಗಿದೆ.

ರಾಜನಕುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಶೀಘ್ರದಲ್ಲೇ ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

Related posts