ಸುದ್ದಿ 

ಸರ್ಜಾಪುರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆ ಬಂಧನ

Taluknewsmedia.com

ಬೆಂಗಳೂರು, ಜುಲೈ 17 – ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತುವಾದ ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿ ಸುಮಾರು 2.290 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಈ ಗಾಂಜಾದ ಮೌಲ್ಯವನ್ನು ಸುಮಾರು ₹50,000 ಎಂದು ಅಂದಾಜಿಸಲಾಗಿದೆ.

ದಿನಾಂಕ 16/07/2025 ರಂದು ಮಧ್ಯಾಹ್ನ 2 ಗಂಟೆಗೆ ಠಾಣಾ ಪಿಎಸ್‌ಐ ಶಭಾನ ಮಕಾಂದರ್ ಅವರು ನೀಡಿದ ವರದಿಯ ಪ್ರಕಾರ, ಸರ್ಜಾಪುರ ಟೌನ್‌ನ ಇಟ್ಟಂಗೂರು ರಸ್ತೆಯ ಶ್ರೀ ಸೋಮೇಶ್ವರ ದೇವಸ್ಥಾನದ ಬಳಿಯಲ್ಲಿ ಗಾಂಜಾ ಮಾರಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಧಾಳಿ ನಡೆಸಿದರು.

ಪೊಲೀಸ್ ಸಿಬ್ಬಂದಿ ಹಾಗೂ ಪಂಚರ ಸಮಕ್ಷಮದಲ್ಲಿ ಮಣು ರಸ್ತೆಯ ಬಳಿ ಒಂದು ಪ್ಲಾಸ್ಟಿಕ್ ಕವರ್ ಹಿಡಿದಿದ್ದ ಮಹಿಳೆಯನ್ನು ಹಿಡಿದು ತಪಾಸಣೆ ನಡೆಸಿದಾಗ, ಆಕೆಯು ಹಿಂದಿಯಲ್ಲಿ ಮಾತನಾಡಿ ಕನ್ನಡ ನನಗೆ ಗೊತ್ತಿಲ್ಲ ಎಂದು, ಮೊದಲಿಗೆ ತಾನೇನೂ ತಿಳಿಯದಂತೆ ವರ್ತಿಸಿದ್ದಳು. ಆದರೆ ನಂತರ ಪ್ಲಾಸ್ಟಿಕ್ ಕವರ್‌ನಲ್ಲಿದ್ದದು ಗಾಂಜಾ ಎಂದು ಒಪ್ಪಿಕೊಂಡಳು.

ಆಕೆಯನ್ನು ವಿಚಾರಣೆ ಮಾಡಿದಾಗ, ಆಕೆ ಶಿಬಾನಿ ಭುನಿಯ (33 ವರ್ಷ), ಪಶ್ಚಿಮ ಬಂಗಾಳ ರಾಜ್ಯದ ಮಿತ್ಯಾಪುರ ಜಿಲ್ಲೆಯ ಮೂಲದವಳಾಗಿದ್ದು, ಸರ್ಜಾಪುರದಲ್ಲಿ ಬಾಡಿಗೆ ಮನೆವೊಂದರಲ್ಲಿ ವಾಸವಿರುವುದಾಗಿ ತಿಳಿಸಲಾಗಿದೆ. ಗಾಂಜಾವನ್ನು ಒಡಿಶಾ ರಾಜ್ಯದ ರಶೀದ್ ಎಂಬುವವರು ತಂದುಕೊಡುತ್ತಿದ್ದು, ತಾನೂ ಅದನ್ನು ಖರೀದಿ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದೆನೆಂದು ಒಪ್ಪಿಕೊಂಡಿದ್ದಾಳೆ.

ಪೊಲೀಸರು ಆಕೆಯ ಬಳಿ ಪ್ಲಾಸ್ಟಿಕ್ ಕವರ್‌ನಲ್ಲಿದ್ದ ಗಾಂಜಾವನ್ನು ಡಿಜಿಟಲ್ ತೂಕ ಯಂತ್ರದಲ್ಲಿ ತೋಳಿಸಿ, 2 ಕೆ.ಜಿ. 290 ಗ್ರಾಂ ಗಾಂಜಾ ಇದ್ದದ್ದು ದೃಢಪಡಿಸಿದರು. ಬಳಿಕ ಅದನ್ನು ಬಿಳಿ ಬಟ್ಟೆಯಲ್ಲಿ ಪ್ಯಾಕ್ ಮಾಡಿ “ಎ” ಅಕ್ಷರದಿಂದ ಸೀಲ್ ಹಾಕಿ ಅಮಾನತು ಪಡಿಸಿಕೊಂಡರು.

ಶಿಬಾನಿ ಭುನಿಯ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಆ್ಯಂಡ್ ಸೈಕೋಟ್ರೋಪಿಕ್ ಸಬ್ಸ್ಟಾನ್ಸಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಿ, ಬಂಧನ ಮತ್ತು ಮುಂದಿನ ತನಿಖೆ ಕೈಗೊಳ್ಳಲಾಗಿದೆ.

Related posts