ಸುದ್ದಿ 

ಜಾತಿ ನಿಂದನೆ ಮತ್ತು ಜೀವ ಬೆದರಿಕೆ ಪ್ರಕರಣ

Taluknewsmedia.com

ಬೆಂಗಳೂರು ಜುಲೈ 19, 2025
ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯೊಬ್ಬರು ತಮ್ಮ ಮನೆ ಬಳಿ ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಅನುಭವಿಸಿದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ರೇಣುಕಾ ಅವರ ಪ್ರಕಾರ, ಅವರು 30 ವರ್ಷಗಳಿಂದ ಕಾಲೋನಿಯಲ್ಲಿ ನೆಲೆಸಿದ್ದಾರೆ ಮತ್ತು ತಮ್ಮ ಮನೆಗೆ ಹೋಗುವ ದಾರಿಯನ್ನು ಬಳಕೆ ಮಾಡುತ್ತಿದ್ದಾರೆ. ಈ ದಾರಿಯ ಪಕ್ಕದಲ್ಲಿರುವ ಜಮೀನಿನ ಮಾಲೀಕರಾದ ಸಂಗೀತ ಮತ್ತು ಜಯಲಕ್ಷ್ಮಿ ಎಂಬುವವರು ಜುಲೈ 15 ರಂದು ಮಧ್ಯಾಹ್ನ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು, “ನಿಮ್ಮನ್ನು ಹೊಡೆದು ಸಾಯಿಸ್ತೀವಿ, ಮನೆ ಬಡಿದು ಹಾಕ್ತೀವಿ” ಎಂದು ಬೆದರಿಕೆ ಹಾಕಿದ್ದಾರೆ.

ಮಹಿಳೆ ತಕ್ಷಣ ಮನೆಯೊಳಗೆ ಓಡಿ ಬಾಗಿಲು ಹಾಕಿಕೊಂಡು ಪತಿಯ ಸಹಾಯವನ್ನು ಕೇಳಿದ್ದಾಳೆ. ಇದೇ ರೀತಿಯ ನಿಂದನೆಗಳು ಈ ಮೊದಲು ಕೂಡ ನಡೆದಿವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಬಾಗಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related posts