ಅಮೆಜಾನ್ ಶಾಖೆಯಿಂದ 50 ಮೊಬೈಲ್ಗಳು ಕಳವು – ಆರು ಉದ್ಯೋಗಿಗಳ ಮೇಲೆ ಆರೋಪ
ಬೆಂಗಳೂರು, ಜುಲೈ 19: 2025
ನಗರದ ಮಲೆಶ್ವರಂ ವೆಸ್ಟ್ನ ಡಾ. ರಾಜಕುಮಾರ್ ರಸ್ತೆಯಲ್ಲಿರುವ ಅಮೆಜಾನ್ ಸೆಲರ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ನ ಪ್ರತಿನಿಧಿ ಹೆಚ್.ಡಿ. ಪರಮೇಶ್ ಅವರು ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಂಸ್ಥೆಯ ಕೆ.ಐ.ಎ.ಡಿ.ಬಿ ಇಂಡಸ್ಟ್ರಿಯಲ್ ನಾರ್ಥ್ ಪಾರ್ಕ್ (ಬಂಡಿಕೊಗೇಹಳ್ಳಿ) ಶಾಖೆಯಿಂದ ಒಟ್ಟು 50 ಮೊಬೈಲ್ ಫೋನ್ಗಳು ಕಳವಾಗಿವೆ ಎಂಬುದಾಗಿ ತಿಳಿಸಿದ್ದಾರೆ.
ದಿನಾಂಕ 09 ಜುಲೈ 2025 ರಂದು ನಡೆದ ಆಡಿಟ್ ವೇಳೆ 50 ಮೊಬೈಲ್ಗಳು ಕಾಣೆಯಾಗಿರುವುದು ಬೆಳಕಿಗೆ ಬಂದಿದ್ದು, ಕಂಪನಿಯ ಸೆಕ್ಯೂರಿಟಿ ತಂಡ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರು ಉದ್ಯೋಗಿಗಳು ಕೆಲಸದ ಸಮಯದಲ್ಲೇ ಒಟ್ಟು 9 ಫೋನ್ಗಳನ್ನು ಕಳವು ಮಾಡುತ್ತಿರುವುದು ದೃಢಪಟ್ಟಿದೆ.
ಆರೋಪದೊಳಗಾದವರು:
ಇಂದ್ರಜೀತ್ ಲಹಾ
ಶಿವಂ ಕೆ.ಆರ್ ಪಾಂಡೆ
ಆಕಾಶ್ ಕುಮಾರ್
ವಿಕಾಸ್ ಕುಮಾರ್
ರೋಹಿತ್ ಕುಮಾರ್ ರಾಮ್
ರಾಜೇಶ್ ಕುಮಾರ್ ರಾಮ್
ಈ ಕುರಿತಂತೆ ಕಂಪನಿಯ ಹಿರಿಯ ಅಧಿಕಾರಿಗಳ ನಿರ್ದೇಶನದ ಮೇರೆಗೆ ಬಾಗಲೂರು ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪೊಲೀಸ್ ಇಲಾಖೆ ಕಳವಾದ ಮೊಬೈಲ್ಗಳ ಪತ್ತೆ ಮತ್ತು ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ತನಿಖೆ ಆರಂಭಿಸಿದೆ.

