ಸುದ್ದಿ 

ಸಿಐಆರ್‌ಪಿಎಫ್ ಸೈನಿಕನ ಅನುಮಾನಾಸ್ಪದ ಸಾವು

Taluknewsmedia.com

ಬೆಂಗಳೂರು, ಜುಲೈ 19, 2025:


ಸಿಆರ್‌ಪಿಎಫ್ (CRPF) ಸಿಬ್ಬಂದಿ ಫೋರ್ಸ್ ನಂ. 255050873 RT/GDGC ಆಗಿರುವ ಯೋಧನೊಬ್ಬನು ಇಂದು ಬೆಳಿಗ್ಗೆ ಸುಮಾರು 06:15 ಗಂಟೆಗೆ ಶಿಬಿರದಲ್ಲಿ ಅನುಮಾನಾಸ್ಪದ ಪರಿಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ. ಘಟನೆ ಬೆಳಗಿನ ಜಾವ ನಡೆದಿದ್ದು, ಸಹೋದ್ಯೋಗಿಗಳಲ್ಲಿ ಆತಂಕ ಮೂಡಿಸಿದೆ.

ಮರಣದ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ. ಘಟನಾ ಸ್ಥಳಕ್ಕೆ ಯಲಹಂಕ ಉಪನಗರ ಪೊಲೀಸರು ದೌಡಾಯಿಸಿದ್ದು, ಅಸ್ವಾಭಾವಿಕ ಮರಣ (U.D.) ಪ್ರಕರಣ ದಾಖಲಾಗಿದೆ. ಇನ್ನಷ್ಟು ಮಾಹಿತಿ ಕಲೆಹಾಕಲು ಪಂಚನಾಮೆ (Inquest Report) ಮತ್ತು ಪೋಸ್ಟ್‌ಮಾರ್ಟಂ ನಡೆಯುತ್ತಿದೆ.

ಯಲಹಂಕ ಉಪನಗರ ಪೊಲೀಸರು ಈ ಪ್ರಕರಣದ ಕುರಿತಾಗಿ ತನಿಖೆ ಮುಂದುವರಿಸಿಕೊಂಡಿದ್ದಾರೆ. ಸಾವಿನ ಹಿನ್ನೆಲೆ ಕುರಿತು ಯಾವುದೇ ನಿಖರವಾದ ಮಾಹಿತಿ ಲಭ್ಯವಿಲ್ಲದ ಕಾರಣದಿಂದಾಗಿ, ಮೃತ್ಯುವಿಗೆ ಕಾರಣವಾದ ಸತ್ಯಾಂಶ ಇನ್ನಷ್ಟೇ ಬಹಿರಂಗವಾಗಬೇಕಾಗಿದೆ.

Related posts