ಸುದ್ದಿ 

ಪ್ರೇಮ ಸಂಬಂಧದ ಹೆಸರಲ್ಲಿ ಲೈಂಗಿಕ ಕಿರುಕುಳ – ಯುವತಿ ನೀಡಿದ ದೂರು

Taluknewsmedia.com

ಬೆಂಗಳೂರು, ಜುಲೈ 19:2025
ನಗರದ ಯುವತಿ ನೀಡಿದ ದೂರಿನ ಪ್ರಕಾರ, ಜೆಬಿನ್ ಎಂಬ ಯುವಕನೊಂದಿಗೆ ಕಳೆದ ಎರಡು ವರ್ಷಗಳಿಂದ ಪ್ರೇಮ ಸಂಬಂಧ ಹೊಂದಿದ್ದ ಅವಳು, ಅವನಿಂದ ಲೈಂಗಿಕ ಕಿರುಕುಳ, ದೈಹಿಕ ಹಿಂಸೆ ಹಾಗೂ ಬೆದರಿಕೆಗಳನ್ನು ಅನುಭವಿಸಿದ್ದಾಳೆ.

2024ರಿಂದಲೇ ಅವನು ಆಕೆಯ ಮೇಲೆ ಹಿಂಸಾತ್ಮಕ ವರ್ತನೆ ತೋರಿಸುತ್ತಿದ್ದನು. 2025ರ ಮೇ 14 ರಂದು ತನ್ನ ರೂಂನಲ್ಲಿ ಲೈಂಗಿಕ ಕಿರುಕುಳ ನೀಡಿದ್ದು, ಆಗಾಗ ದೈಹಿಕವಾಗಿ ಹಾನಿಯನ್ನೂ ಮಾಡಿದ್ದಾನೆ. ಜುಲೈ 17 ರಂದು ರಾತ್ರಿ 12ರಿಂದ ಬೆಳಿಗ್ಗೆ 5ರವರೆಗೆ ಆಕೆಯ ಮನೆ ಬಳಿ ಬಂದು “ನನ್ನ ಜೊತೆ ಬಾ” ಎಂದು ಒತ್ತಾಯಿಸಿದ್ದು, ನಿರಾಕರಣೆ ಮಾಡಿದಾಗ “ನಾನು ಸತ್ತು ಹೋಗುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ.

ಇದಕ್ಕೂ ಮೀರಿಯೂ, ಆಕೆಯ ಮೊಬೈಲ್ ಹೊಡೆದು ನಾಶಪಡಿಸಿದ್ದಾನೆ ಮತ್ತು ಖಾಸಗಿ ಫೋಟೋಗಳನ್ನು ಹರಡುವ ಬೆದರಿಕೆಯನ್ನೂ ನೀಡಿದ್ದಾನೆ.
ಈ ಕುರಿತು ಯುವತಿ ಯಲಹಂಕ ಉಪನಗರ ಪೊಲೀಸರಿಗೆ ದೂರು ನೀಡಿದ್ದು, ಜೆಬಿನ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

Related posts