ಸುದ್ದಿ 

ಬೆಂಗಳೂರು: ಹಣ ಪಾವತಿ ವಿಚಾರಕ್ಕೆ ನೌಕರನಿಗೆ ಹಲ್ಲೆ – ನಾಲ್ವರು ವಿರುದ್ಧ ದೂರು

Taluknewsmedia.com

ಬೆಂಗಳೂರು, ಜುಲೈ 20:2025
ನಗರದ ಚಿಕ್ಕಪೇಟೆಯಲ್ಲಿ money settlement ವಿಚಾರಕ್ಕೆ ನೌಕರನೊಬ್ಬನಿಗೆ ಹಲ್ಲೆ ಮಾಡಿದ ಘಟನೆ ನಡೆದಿದೆ. ಈ ಸಂಬಂಧ ಅಂಗಡಿ ಮಾಲೀಕರಾದ ತೇಜಸ್ ಗಾಂಧಿ ಅವರು ನಾಲ್ವರು ವ್ಯಕ್ತಿಗಳ ವಿರುದ್ಧ ದೂರು ನೀಡಿದ್ದಾರೆ.

ತೇಜಸ್ ಅವರು “ಗ್ರಾ ಬರಿ ಇಂಕ್” ಎಂಬ ಎಲೆಕ್ಟ್ರಾನಿಕ್ ಅಂಗಡಿಯನ್ನು ಹೊಂದಿದ್ದು, ಜುಲೈ 2024 ರಿಂದ ಬ್ಯಾಟರಾಯನಪುರದ ಪಿ.ಎನ್. ಬ್ರಿಟಿಂಗ್ ಅಂಗಡಿಗೆ ಸರಕುಗಳನ್ನು ಕೊಡುತ್ತಿದ್ದರು. ಆದರೆ ಪಾವತಿ ಮಾಡದೆ ವಿಳಂಬ ಮಾಡಲಾಗುತ್ತಿದ್ದರಿಂದ, ಜುಲೈ 17 ರಂದು ತಮ್ಮ ನೌಕರ ನಿತ್ಯಾನಂದರನ್ನು ಹಣ ಕೇಳಲು ಕಳಿಸಿದರು.

ಅಂಗಡಿಗೆ ತೆರಳಿದ ನಿತ್ಯಾನಂದ ಅವರನ್ನು ಪವನ್ ಅಂಗಡಿಯ ಇಬ್ಬರು ನೌಕರರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದರು. ಬಳಿಕ ತೇಜಸ್ ಗಾಂಧಿ ಅವರು ಅಂಗಡಿಗೆ ಹೋಗಿದಾಗ, ಅಂಗಡಿಯಲ್ಲಿ ಇದ್ದ ನಾಲ್ವರು (ಒಬ್ಬರು ಮಹಿಳೆ) ಅವರು ಕೂಡ ನಿಂದನೆ ಮಾಡಿ, ತಲೆಗೆ ಮತ್ತು ಕಾಲಿಗೆ ಹೊಡೆದು ಬೆದರಿಕೆ ಹಾಕಿದರು.

ಕೊಡಿಗೆಹಳ್ಳಿ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

Related posts