ಬೀಗ ಮುರಿದು ಮನೆ ಕಳ್ಳತನ – ₹3.5 ಲಕ್ಷ ಮೌಲ್ಯದ ಚಿನ್ನದ ಸರ ಕಳವು
ಬೆಂಗಳೂರು, ಜುಲೈ 20:2025
ನಗರದ ಪವಿತ್ರಾ ದೇವಿ ಎಂಬ ಮಹಿಳೆಯ ಮನೆಗೆ ಕಳ್ಳರು ದಾಳಿ ಮಾಡಿ, ₹3.5 ಲಕ್ಷ ಮೌಲ್ಯದ ಚಿನ್ನದ ಸರ ಕಳವು ಮಾಡಿಕೊಂಡು ಹೋಗಿದ್ದಾರೆ.
ಪವಿತ್ರಾ ದೇವಿಯವರು ಮದ್ಯಾಹ್ನ 1:15ರ ಸುಮಾರಿಗೆ ಮಕ್ಕಳನ್ನು ಶಾಲೆಯಿಂದ ಕರೆತರುವುದಕ್ಕಾಗಿ ಮನೆ ಬೀಗ ಹಾಕಿ ಹೊರಗೋಡಿದ್ದರು. ಕೀಲಿಯನ್ನು ಶೂ ರ್ಯಾಕ್ನಲ್ಲಿ ಇಟ್ಟು ಹೋಗಿದ್ದರು. ಅವರು ಸಂಜೆ 2 ಗಂಟೆಗೆ ಮನೆಗೆ ಬಂದಾಗ ಬಾಗಿಲು ತೆರೆಯಲಾಗಿದ್ದು, ಮನೆಯ ವಸ್ತುಗಳು ಚದುರಿಕೊಂಡಿದ್ದವು. ಕಬೋರ್ಡ್ಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಸರ ಕಳವಾಗಿದ್ದುದಾಗಿ ಅವರು ಹೇಳಿದ್ದಾರೆ.
ಈ ಬಗ್ಗೆ ಅವರು ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

