ಸುದ್ದಿ 

ಗಂಡನಿಂದ ಹಣ ವಂಚನೆ, ಮನೆ ಬಿಟ್ಟು ಹೋಗಿ ಜೀವ ಬೆದರಿಕೆ – ಮಹಿಳೆಯು ಪೊಲೀಸ್ ಠಾಣೆಗೆ ದೂರು

Taluknewsmedia.com

ಬೆಂಗಳೂರು, ಜುಲೈ 20: 2025
ನಗರದ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ಸ್ಥಳೀಯ ಮಹಿಳೆಯೊಬ್ಬರು ತಮ್ಮ ಗಂಡ ಹಾಗೂ ಸಂಬಂಧಿಕರ ವಿರುದ್ಧ ಗಂಭೀರ ಆರೋಪಗಳನ್ನು ಹೊರಡಿಸಿ ದೂರು ನೀಡಿದ್ದಾರೆ.

ನಾಗರತ್ನ ಅವರು ಹೇಳಿಕೆಯಂತೆ, ಅವರು 7 ವರ್ಷಗಳ ಹಿಂದೆ ಶ್ರೀಗಂಧಕಾವಲಿನ ನಿವಾಸಿ ಮಲಿಕಾರ್ಜುನ ಎಂಬುವವರನ್ನು ಪ್ರೀತಿಸಿ ನಿಕಟದ ನಾಗರಬಾವಿಯಲ್ಲಿ ನೋಂದಣಿ ಮದುವೆ ಮಾಡಿಕೊಂಡಿದ್ದರು. ಮದುವೆಯ ನಂತರ ದಂಪತಿ ವಡೇರಹಳ್ಳಿಯ ರೈನೋ ಲೇಔಟ್ ನಲ್ಲಿ ಬಾಡಿಗೆ ಮನೆಗೆ ಇಳಿದುಕೊಂಡು ವಾಸಿಸುತ್ತಿದ್ದರು.

ಸಮಾಜ ಕಲ್ಯಾಣ ಇಲಾಖೆ ಅವಳಿ ಜಾತಿ ಮದುವೆಗೆ ನೀಡುವ ₹3,00,000 ಹಣವನ್ನು ಮಹಿಳೆ ಪಡೆದಿದ್ದು, ಅದರಲ್ಲಿ ₹1,50,000 ಅವರಿಬ್ಬರ ಹೆಸರಿನ ಬ್ಯಾಂಕ್ ಖಾತೆಗೆ ಜಮೆಯಾಗಿತ್ತು. ಮಲಿಕಾರ್ಜುನ ಅವರು ‘ನಾನು ನಿನ್ನನ್ನು ನೋಡಿಕೊಳ್ಳುತ್ತೇನೆ’ ಎಂಬ ನಂಬಿಕೆಯಡಿ ಆ ಸಂಪೂರ್ಣ ಹಣವನ್ನು ಪಡೆದು ಕಾರು ಖರೀದಿಗೆ ಬಳಸಿದರಾದರೂ, ಸಾಲ ಹಣ ತೀರಿಸಲಾಗದೆ ಕಾರು ಸೀಜ್ ಆಗಿದೆ.

ಇದಾದ ಬಳಿಕ ಮನೆಯ ವಸ್ತುಗಳನ್ನು ಮಾರಾಟ ಮಾಡಿ, ಮಲಿಕಾರ್ಜುನ ಅವರು ತಮ್ಮ ತವರು ಊರಾದ ಹರವಿ, ಕಲಘಟಗಿ ತಾಲೂಕಿನ ದಾರವಾಡಕ್ಕೆ ತೆರಳಿ ಮರುಬಾರಿಯೇ ಮನೆಗೆ ಬಾರದಿದ್ದಾರೆ. ಮಹಿಳೆ ಅನಾರೋಗ್ಯದಿಂದ ಬಳಲುತ್ತಿದ್ದು, ಮನೆ ಬಾಡಿಗೆಯನ್ನೂ ತೀರಿಸಲಾಗದ ಪರಿಸ್ಥಿತಿಯಲ್ಲಿದ್ದಾರೆ.

ಇನ್ನೂ ಕೆಲ ದಿನಗಳ ಹಿಂದೆ ಮಹಿಳೆ ತಮ್ಮ ಗಂಡನ ಮಾವ, ಮಾವನ ಮಗಳು ಹಾಗೂ ಸಂಬಂಧಿಕರಿಗೆ ಸಂಪರ್ಕಿಸಿದಾಗ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ ಎಂಬ ಅಂಶವನ್ನು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮಲಿಕಾರ್ಜುನ ಹಾಗೂ ಸಂಬಂಧಿಕರಾದ ಮಾತೇಶ್, ಶಿಲ್ಪ, ಶಿವಪ್ಪ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Related posts