ಮಹಿಳೆಗೆ ಬೆದರಿಕೆ ಮತ್ತು ದೈಹಿಕ ಹಲ್ಲೆ: ಆರು ಮಂದಿಯ ವಿರುದ್ಧ ಎಫ್‌ಐಆರ್
ಬೆಂಗಳೂರು, ಜುಲೈ 20 2025
ನಗರದ ನಿವಾಸಿಯಾದ ಮಹಿಳೆಯೊಬ್ಬರು ಕುಡಿಯುವ ನೀರು ತರಲು ಹೊರಟ ಸಂದರ್ಭದಲ್ಲಿ ಆರು ಮಂದಿ ಯುವಕರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ದೂರುದಾರೆಯು ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಅವರು 06.05.2025 ರಂದು ಮನೆಯ ಹತ್ತಿರದ ಆರ್.ಓ ಘಟಕಕ್ಕೆ ನೀರು ತರಲು ಹೋಗಿದ್ದ ಸಂದರ್ಭದಲ್ಲಿ ಅಮ್ಮದ್, ಶಾಬಾಜ್, ಸಲ್ಮಾನ್, ಅದು, ಶಾಮಿಯಾ ಹಾಗೂ ಸಾನು ಎಂಬವರು ಆಕೆಯ ಹತ್ತಿರ ಬಂದು ಜಗಳ ಶುರುವಿಟ್ಟರು.
ಈ ವೇಳೆ ಆರೋಪಿಗಳು ಮಹಿಳೆಯ ಬಳಿ ಇದ್ದ ಚಿನ್ನದ ಸರ ಹಾಗೂ ಪರ್ಸ್ ಕಸಿದುಕೊಂಡು, ಪರ್ಸ್‌ನಲ್ಲಿದ್ದ ರೂ.7,000 ನಗದನ್ನು ದೋಚಿದ್ದಾರೆ. ಅಲ್ಲದೆ, ಆಕೆಯು ಹಾಗೂ ಅವರ ಕುಟುಂಬದ ಸದಸ್ಯರಿಗೆ ಅವಾಚ್ಯ ಶಬ್ದಗಳಿಂದ ಬೈದರು ಮತ್ತು ಸುಳ್ಳು ಪ್ರಕರಣಗಳನ್ನು ದಾಖಲಿಸುವ ಬೆದರಿಕೆ ನೀಡಿದ ನಂತರ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಂಬರ್ 2.4.9938/2025 ದಾಖಲಾಗಿದ್ದು, ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೀಡಿತೆ ಮಹಿಳೆ ಮನವಿ ಮಾಡಿಕೊಂಡಿದ್ದಾರೆ.

