ಸುದ್ದಿ 

ಆನ್‌ಲೈನ್ ಹೂಡಿಕೆ ಮೋಸ – ಫೇಸ್‌ಬುಕ್ ಲಿಂಕ್ ಮೂಲಕ ₹1.8 ಲಕ್ಷ ಕಳೆದುಕೊಂಡ ವ್ಯಕ್ತಿ

Taluknewsmedia.com

ಬೆಂಗಳೂರು, 20 ಜುಲೈ 2025
ಫೇಸ್‌ಬುಕ್‌ನಲ್ಲಿ ಬಂದ OTC ಟ್ರೇಡಿಂಗ್ ಲಿಂಕ್ ಮೂಲಕ ಹೂಡಿಕೆ ಮಾಡಿದ ವ್ಯಕ್ತಿಯೊಬ್ಬರು ₹1,80,000 ರಷ್ಟು ಹಣವನ್ನು ಕಳೆದುಕೊಂಡ ಘಟನೆ ನಡೆದಿದೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ.

ಪೀಡಿತರು 09/06/2025 ರಂದು “L317-Kuvera Wealth Strategy Community” ಎಂಬ ಫೇಸ್‌ಬುಕ್ ಗುಂಪಿನಿಂದ OTC ಟ್ರೇಡಿಂಗ್ ಲಿಂಕ್‌ ಅನ್ನು ಪಡೆದಿದ್ದರು. ಅದರ ಮೂಲಕ ಒಂದು ತಿಂಗಳಲ್ಲಿ 300% ಲಾಭದ ಭರವಸೆ ನೀಡಲಾಗಿತ್ತು. ಇದರೊಂದಿಗೆ ಮತ್ತೊಂದು ಗುಂಪಾದ “Kuvera Hub” ಅನ್ನು ಮಾರ್ಗದರ್ಶನಕ್ಕಾಗಿ ರಚಿಸಲಾಗಿದ್ದು, ಅದರ ಮೊಬೈಲ್ ಆಪ್ ಡೌನ್‌ಲೋಡ್ ಮಾಡಲು ಸೂಚಿಸಲಾಗಿತ್ತು.

ಪೀಡಿತರು ಆಪ್ ಮೂಲಕ 10/06/2025 ರಿಂದ 25/06/2025 ರವರೆಗೆ ಹಂತ ಹಂತವಾಗಿ ಒಟ್ಟು ₹1,80,000 ಹಣವನ್ನು UPI ಮತ್ತು NEFT ಮೂಲಕ ಪಾವತಿಸಿದರು. ಆದರೆ ನಂತರ ಲಾಭ ತೋರಿಸಲಾಗಿದರೂ ಹಣವನ್ನು ಹಿಂಪಡೆಯಲು ಸಾಧ್ಯವಾಗಲಿಲ್ಲ. ಆಪ್‌ನಲ್ಲಿ ಹಣ ‘ಫ್ರೀಜ್’ ಆಗಿದೆಯೆಂದು ತೋರಿಸಲಾಯಿತು.

ಇದು ಎತ್ತಿತಪ್ಪದ ಆನ್‌ಲೈನ್ ಹೂಡಿಕೆ ಮೋಸದ ಪ್ರಕರಣವಾಗಿದ್ದು, ಸಂಪಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

Related posts