ಸುದ್ದಿ 

ವಿದೇಶಿ ಮಹಿಳೆ ಅನಧಿಕೃತವಾಗಿ ವಾಸ: ಮನೆಯ ಮಾಲೀಕರ ವಿರುದ್ಧ ಕ್ರಮ

Taluknewsmedia.com

ಬೆಂಗಳೂರು, ಜುಲೈ 21, 2025 –
ಬೆಂಗಳೂರು ನಗರದ ಹೆಸರುಘಟ್ಟ ಮುಖ್ಯರಸ್ತೆಯ ಮೇಡಿ ಅಗ್ರಹಾರ ಪ್ರದೇಶದಲ್ಲಿ ವಿದೇಶಿ ಪ್ರಜೆ Namanya Natasha ಎಂಬ ಮಹಿಳೆ ಅನುಮತಿಸದ ರೀತಿಯಲ್ಲಿ ವಾಸಿಸುತ್ತಿರುವ ಮಾಹಿತಿ ಬಂದ ಹಿನ್ನೆಲೆ, ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ.

ದಿನಾಂಕ 19.07.2025ರಂದು ವಿಜಯರಾಯಪುರ ಠಾಣೆಯ ಎಸ್ಎಚ್‌ಒ ರವರ ನಿರ್ದೇಶನದಂತೆ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಮತ್ತು ಶ್ರಿಮತಿ ಕಲಾವತಿ ಮಹೆಚ್ಸಿ ಅವರು ಗುಪ್ತ ಮಾಹಿತಿಯ ಆಧಾರದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತನಿಖೆಯ ವೇಳೆ, ಯುಗಾಂಡಾ ದೇಶದ ಪ್ರಜೆ Namanya Natasha (ಪಾಸ್‌ಪೋರ್ಟ್ ಸಂಖ್ಯೆ: B00514853) ಅವರು ನಂ. 292, ಮೇಡಿ ಅಗ್ರಹಾರ, ಹೆಸರುಘಟ್ಟ ಮುಖ್ಯರಸ್ತೆ ಎಂಬ ವಿಳಾಸದಲ್ಲಿ ವಾಸಿಸುತ್ತಿರುವುದು ದೃಢವಾಯಿತು.

ಈಕೆಯ ವೀಸಾ ದಿನಾಂಕ 14.01.2026ರ ವರೆಗೆ ಮಾನ್ಯವಿದ್ದರೂ, ಈ ರೀತಿಯ ವಾಸದ ಬಗ್ಗೆ ಯಾವುದೇ ಅಧಿಕಾರಪತ್ರ ಅಥವಾ ಪತ್ರಿಕೆಯನ್ನು ಮನೆ ಮಾಲೀಕರಾದ ಹನುಮಂತ ಅವರು ನೀಡದಿರುವುದರಿಂದ, ಇವರ ವಿರುದ್ಧ ಯಲಹಂಕ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ಹಂತದ ತನಿಖೆ ಕೈಗೊಂಡಿದ್ದಾರೆ

Related posts