ಸುದ್ದಿ 

ಯಲಹಂಕ: ಲಾರಿ ಡ್ರೈವರ್ ಮೇಲೆ ಹಲ್ಲೆ – ಸ್ಥಳೀಯ ಇಬ್ಬರ ವಿರುದ್ಧ ಪ್ರಕರಣ

Taluknewsmedia.com

ಯಲಹಂಕ, ಜುಲೈ 25: 2025
ಲಾರಿ ಚಾಲಕನೊಬ್ಬರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹಲ್ಲೆ ನಡೆಸಿದ ಘಟನೆ ಗಂಚಯಲ್ ಪ್ರದೇಶದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಅರವಿಂದ್ ಮತ್ತು ಶ್ರೀನಿವಾಸ್ ಎಂಬ ಇಬ್ಬರ ವಿರುದ್ಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಆನಂದ ಅವರು ಲಾರಿ ಡ್ರೈವರ್, ಗಂಚಯಲ್ ಪ್ರದೇಶದಲ್ಲಿನ ಲೆಕ್ಟರ್ ಶಾಪ್ ಹತ್ತಿರ ಇರುವ ಊಟದ ಗಾಡಿಯಿಂದ ಎಗ್ ರೈಸ್ ತೆಗೆದುಕೊಂಡು ಬರುತ್ತಿದ್ದ ವೇಳೆ, ಅರವಿಂದ್ ಮತ್ತು ಶ್ರೀನಿವಾಸ್ ಅವರು ಸ್ಥಳಕ್ಕೆ ಬಂದು ತಡೆದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಬಳಿಕ ತಲೆ ಮತ್ತು ಮುಖಕ್ಕೆ ಕೈಗಳಿಂದ ಹೊಡೆದು ಪ್ರಾಣ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಘಟನೆಯ ತಕ್ಷಣವೇ ರವಿ ಮತ್ತು ಸುರೇಶ್ ಎಂಬವರು ಗಾಯಗೊಂಡ ಚಾಲಕನನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿಸಿದ್ದಾರೆ. ಪ್ರಸ್ತುತ ಚಾಲಕರು ಆಸ್ಪತ್ರೆಯಿಂದ ಹೊರಬಂದಿದ್ದು, ಹೊರರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ಕುರಿತು ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಪ್ರಕರಣದ ತನಿಖೆ ಮುಂದುವರಿದಿದೆ.

Related posts