21 ವರ್ಷದ ಯುವತಿ ನಾಪತ್ತೆ – ಮದುವೆಯಾಗಿ ಹೊಗಿದ್ದ ಇರಬಹುದೆಂದು ಪೋಷಕರ ಶಂಕೆ
ಬೆಂಗಳೂರು – 25 ಜುಲೈ 2025
ಕಮ್ಮಗೊಂಡನಹಳ್ಳಿಯಲ್ಲಿ 21 ವರ್ಷದ ಯುವತಿ ಮರಿಯಾ ಮೆರ್ಲಿನ್ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈಕೆ ಬಿಎ ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯಾಗಿದ್ದು, ಕಳೆದ 21 ಜುಲೈ 2025 ರಂದು ಬೆಳಿಗ್ಗೆ 11:30ರ ಸುಮಾರಿಗೆ “ಸ್ವಲ್ಪ ಹೊತ್ತಲ್ಲಿ ಬರುತ್ತೇನೆ” ಎಂದು ಹೇಳಿ ಮನೆಯಿಂದ ಹೊರಟು ಹೋದ ನಂತರ ವಾಪಸ್ ಬಾರದೇ ಕಾಣೆಯಾಗಿದ್ದಾಳೆ.
ಮರಿಯಾ ಮೆರ್ಲಿನ್ ಅವರ ತಾಯಿ ನೀಡಿದ ದೂರಿನ ಪ್ರಕಾರ, ಈಕೆ ಕಳೆದ ಎರಡು ತಿಂಗಳಿನಿಂದ ತನ್ನ ತಾಯಿಯ ಜೊತೆಗೆ ವಾಸವಿದ್ದಳು. ಈಕೆ ಹಿಂದೆ ಸಿಮ್ಸನ್ ವರದರಾಜು ಎಂಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಳು ಮತ್ತು ಒಂದು ಸಮಯದಲ್ಲಿ ಆತನೊಂದಿಗೆ ವಾಸಿಸಿದ್ದಳು. ಇದೀಗ ಮರಿಯಾ ಮತ್ತೆ ಆತನೊಂದಿಗೆ ಹೋಗಿರಬಹುದೆಂಬ ಶಂಕೆ ಪೋಷಕರಿಗಿದೆ.
ಮರಿಯಾ ಮೆರ್ಲಿನ್ ಅವರ ವೈಶಿಷ್ಟ್ಯಗಳು ಹೀಗಿವೆ – ಗೋಧಿ ಬಣ್ಣ, 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲುಮುಖ. ಬಲ ಕಾಲಿನ ಮೇಲೆ ಶೆಟಲ್ ಕಾಕ್ ಗುರುತು, ಎಡಗೈಯಲ್ಲಿ ನಾಯಿ ಪಾದದ ಟ್ಯಾಟೂ, ಹೊಟ್ಟೆಯಲ್ಲಿ ಹಳೆಯ ಅಪರೇಷನ್ನ ಗುರುತು ಇವೆ. ಇವಳು ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಮಾತನಾಡಬಲ್ಲಳು.
ಈ ಸಂಬಂಧ ರಾಜನಕುಂಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಸಂಖ್ಯೆ 215/2025ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮರಿಯಾ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಸಾರ್ವಜನಿಕರು ರಾಜನಕುಂಟೆ ಠಾಣೆಯನ್ನು ಸಂಪರ್ಕಿಸಲು ಪೊಲೀಸರು ವಿನಂತಿಸಿದ್ದಾರೆ

