ಸುದ್ದಿ 

ಮಾವಳ್ಳಿ ಪುರ ರಸ್ತೆಯಲ್ಲಿ ಕಾರು ಅಪಘಾತ –一5ಜನರಿಗೆ ಗಾಯ

Taluknewsmedia.com

ಬೆಂಗಳೂರು ಗ್ರಾಮಾಂತರ 25ಜುಲೈ 2025:
ಬ್ಯಾಲಕೆರೆ ಬಳಿ ಸಂಬಂಧಿಕರ ಮನೆಗೆ ಊಟಕ್ಕೆ ಹೋಗಿದ್ದ ಕುಟುಂಬದ ಕಾರು ಮಾವಳ್ಳಿ ಪುರ ರಸ್ತೆ ತಿರುವಿನಲ್ಲಿ ಅಪಘಾತಕ್ಕೀಡಾಗಿದೆ. 20 ಜುಲೈ 2025 ರಂದು ಸಂಜೆ 6:30ರ ಸುಮಾರಿಗೆ KA04NB2717 ನಂಬರ್‌ನ ನೆಕ್ಸಾನ್ EV ಕಾರಿನಲ್ಲಿ ವಿನಯ್ ಕುಮಾರ್ ಎಂಬವರು ಚಾಲನೆ ಮಾಡುತ್ತಿದ್ದು, ಕುಟುಂಬದವರು ಊಟ ಮುಗಿಸಿ ರಾತ್ರಿ 10:30ರ ಸುಮಾರಿಗೆ ಮನೆಗೆ ವಾಪಸ್ಸಾಗುತ್ತಿದ್ದರು.

ಮಾವಳ್ಳಿ ಪುರ ಕಾಲೋನಿಯ ತಿರುವಿನಲ್ಲಿ ಎದುರಿನಿಂದ ಬಂದ ಅತಿಹೆಚ್ಚು ಹೈಬೀಮ್ ಲೈಟ್ ಹೊಂದಿದ್ದ ವಾಹನವನ್ನು ತಪ್ಪಿಸಲು ಪ್ರಯತ್ನಿಸಿದ ಚಾಲಕ ಕಾರು ರಸ್ತೆಯ ಎಡಭಾಗಕ್ಕೆ ತಿರುಗಿಸಿದ್ದರಿಂದ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಕಾರಿನ ಮುಂಭಾಗ ಸಂಪೂರ್ಣವಾಗಿ ಜಖಂ ಆಗಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಗಾಯಗೊಂಡಿದ್ದಾರೆ.

ಗಾಯಾಳುಗಳು:

ಪಿರ್ಯಾದಿದಾರ: ಬಲ ಭುಜ ಹಾಗೂ ಸೊಂಟದ ಭಾಗದಲ್ಲಿ ಪೆಟ್ಟು

ಅರಾ ಮತ್ತು ಯಶ್ಮಿತಾ: ಸಣ್ಣಪುಟ್ಟ ಗಾಯಗಳು

ಭೂಮಿಕಾ ಸಿ ಗೌಡ: ಎಡ ಭುಜದ ಬಳಿ ಗಾಯ

ಅಮೂಲ್ಯ ಸಿ ಗೌಡ: ಬಲ ಮುಂಗೋ ಹಾಗೂ ಮೂಗು ಭಾಗದಲ್ಲಿ ಪೆಟ್ಟು

ಚಾಲಕ ವಿನಯ್ ಕುಮಾರ್ ಅವರಿಗೆ ಯಾವುದೇ ಗಾಯಗಳಾಗಿಲ್ಲ. ಅವರು ತಕ್ಷಣವೇ ಮತ್ತೊಂದು ವಾಹನದಲ್ಲಿ ಎಲ್ಲಾ ಗಾಯಾಳುಗಳನ್ನು ಹೆಬ್ಬಾಳದ ಮಣಿಪಾಲ್ ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಮುಂದುವರಿಯುತ್ತಿದೆ.

ರಾಜನಕುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಈ ಸಂಬಂಧ 216/2025 ಅಡಿಯಲ್ಲಿ IPC ಸೆಕ್ಷನ್ 281 ಮತ್ತು 125 ಕೇಸು ದಾಖಲಿಸಲಾಗಿದೆ.

Related posts