ಆದಿಚುಂಚನಗಿರಿ ವಿಶ್ವವಿದ್ಯಾಲಯದ ೫ನೇ ಘಟಿಕೋತ್ಸವ..
ನಾಗಮಂಗಲ : ಪ್ರತಿಷ್ಠಿತ ಆದಿಚುಂಚನಗಿರಿ ವಿಶ್ವವಿದ್ಯಾಲಯದ ೫ನೇ ಘಟಿಕೋತ್ಸವವು ಇದೇ ಜುಲೈ ೨೯ರಂದು ಬೆಳಿಗ್ಗೆ ೧೦:೩೦ಕ್ಕೆ ಬಿಜಿಎಸ್ ಸಭಾಂಗಣದಲ್ಲಿ ಜರುಗಲಿದೆ ಎಂದು ಕುಲಪತಿ ಎಸ್ ಎನ್ ಶ್ರೀಧರ ತಿಳಿಸಿದರು.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಸಮಾರಂಭದ ದಿವ್ಯ ಸಾನಿಧ್ಯವನ್ನು ಗೌರವಾನ್ವಿತ ಕುಲಾಧಿಪತಿಗಳು ಹಾಗೂ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಇಸ್ರೋ ಮಾಜಿ ಅಧ್ಯಕ್ಷರಾದ ಡಾ. ಎಸ್. ಸೋಮನಾಥ್, ಗೌರವ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಕೃಷಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚಲುವರಾಯಸ್ವಾಮಿ ಭಾಗವಹಿಸುವರು. ವಿಶ್ವವಿದ್ಯಾಲಯದ ಕುಲಪತಿ ಡಾ ಎಸ್ ಎನ್ ಶ್ರೀಧರ. ಕುಲಸಚಿವ ಡಾ ಸಿ ಕೆ ಸುಬ್ಬರಾಯ.ಕುಲ ಸಚಿವ (ಮೌಲ್ಯಮಾಪನ) ಡಾ. ನಾಗರಾಜ್ ಉಪಸ್ಥಿತರಿರುವರು.
೯೬೮ ವಿದ್ಯಾರ್ಥಿನಿಯರಿಗೆ ೯೧೨ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಪ್ರಮಾಣ ಪತ್ರ ಹಾಗೂ ೨೦ ಸಂಶೋಧನಾರ್ಥಿಗಳಿಗೆ ಡಾಕ್ಟರೇಟ್ ಪುರಸ್ಕಾರ ನೀಡಲಾಗುವುದು.ಘಟಿಕೋತ್ಸವ ಪ್ರಮಾಣ ಪತ್ರ ಪಡೆಯುತ್ತಿರುವರಲ್ಲಿ ಶೇ. ೬೫ರಷ್ಟು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಎಂಬುದು ಸಂತೋಷದ ಸಂಗತಿ ಎಂದರು.
ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ದತ್ತಿನಿಧಿ ಪುರಸ್ಕಾರ : ಮೆಡಿಸಿನ್ ವಿಭಾಗದಲ್ಲಿ ರೇಖ ಎಸ್ ರವರಿಗೆ ಕಣಗಲ್ ಎಲ್ ಸತ್ಯನಾರಾಯಣ ದತ್ತಿ ಪುರಸ್ಕಾರ. ನರ್ಸಿಂಗ್ ವಿಭಾಗದಲ್ಲಿ ಮಂಪಿ ಡೈ ರವರಿಗೆ ಚಂದ್ರಶೇಖರ್ ಶೆಟ್ಟಿ ದತ್ತಿ ಪುರಸ್ಕಾರ. ಓಬಿಜಿ ವಿಭಾಗದಿಂದ ದೀಕ್ಷಿತ ಕೆ ಅಯ್ಯರ್ ರವರಿಗೆ ನಂಜಮ್ಮ ಲಕ್ಷ್ಮೇಗೌಡ ದತ್ತಿ ಪುರಸ್ಕಾರ. ಮೆಡಿಸಿನ್ ವಿಭಾಗದಿಂದ ದರ್ಶನ್ ಹೆಚ್ ರವರಿಗೆ ದೇವಮ್ಮ ಪುಟ್ಟಚ್ಚಿ ಸಿದ್ದೇಗೌಡ ಮತ್ತು ಸುಶೀಲ ಜಯರಾಮ್ ದತ್ತಿ ಪುರಸ್ಕಾರ . ಜಯಪ್ರಕಾಶ್ ನಾಯರ್ ಸಂಶೋಧನಾ ಶ್ರೇಷ್ಠ ಪ್ರಶಸ್ತಿಯನ್ನು ಪ್ರೊ.ಪ್ರಕಾಶ್ ಎನ್ ಗೌಂಡಣ್ಣನವರ್ರವರು ಮುಡಿಗೇರಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಚಿನ್ನದ ಪದಕ ವಿಜೇತರು : ಮೆಡಿಸಿನ್ ವಿಭಾಗ : ಡಾ. ದೀಕ್ಷಿತ ಕೆ ಅಯ್ಯರ್. ಡಾ. ವರ್ಷ ಬಿ.
ಇಂಜಿನಿಯರಿಂಗ್ ವಿಭಾಗ : ಲಿಖಿತ್ ಆರ್ ಅರ್ಬಿಯ ಮುಸ್ಕಾನ್ ಬಿಂದು ವಿ ಆರ್ ಪ್ರೀತಿ ಕೆ ಡಿ ರೇಖಾರಾಣಿ ನಿತ್ಯಶ್ರೀ ಎಸ್ ಜೈನ್ ಮನೋಜ್ ಗೌಡ ಡಿ ಕೆ ಪುನೀತ್ ಕುಮಾರ್ ಉಲ್ಲಾಸ್ ಎಸ್ ಜೀವಿತ ಆರ್ ಜ್ಞಾನ ಡಿ ಎನ್
ಡಾಕ್ಟರೇಟ್ ಪುರಸ್ಕೃತರು : ಡಾ. ಅದಾರಿ ರಮೇಶ್. ಡಾ. ಶಿವಕುಮಾರ್ ಯಾದವ್. ಡಾ. ಮಹೇಶ್ ಡಿ ಎಸ್. ಡಾ. ಅಂಜಲಿ ಬಿ ವಿ ಡಾ. ಕವಿತಾ ಬಿ ಸಿ ಡಾ. ಮಲ್ಲಮ್ಮ ಟಿ. ಡಾ. ಯೋಗಾನಂದ ಶ್ರೇಷ್ಠ ಡಾ. ಮಹಾಲಿಂಗೇಗೌಡ ಎಚ್ ಆರ್ ಡಾ. ಮಹಮದ್ ಮಸ್ರಿ ಡಾ. ಪ್ರಭಾವತಿ ಕೆ ಡಾ. ರವಿ ಎಲ್ಎಸ್ ಡಾ. ತ್ರಿಪಾತಿ ಅಮೃತಾನಂದ ಎಸ್ ಡಾ. ಪ್ರಕಾಶ್ ಕುಮಾರ್ ಬಿ ಡಾ. ಸತೀಶ ಜಿ ಡಾ. ಯಶವಂತ್ ಜಿ ಡಾ. ರಘು ಕುಮಾರ್ ಬಿ ಎಸ್ ಡಾ. ಶ್ವೇತ ಕೆ ಆರ್ ಡಾ. ಶೋಭನ ಎನ್ .
ಪತ್ರಿಕಾಗೋಷ್ಠಿಯಲ್ಲಿದ್ದ ಕುಲ ಸಚಿವ ಡಾಕ್ಟರ್ ಸಿ ಕೆ ಸುಬ್ಬರಾಯ ಮಾತನಾಡಿ ಘಟಿಕೋತ್ಸವವನ್ನು ಹಬ್ಬದಂತೆ ಆಚರಿಸುತ್ತಿದ್ದೇವೆ ಸಾಧಕರು ಮತ್ತು ಸಾಧಕ ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.ಬಿಜಿಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ರೋಹಿತ್ ಇದ್ದರು.
ವರದಿ-ಕೌಶಿಕ್ ತಟ್ಟೇಕೆರೆ)

