ಯಲಹಂಕ ಮಿನಿ ವಿಧಾನಸೌಧ ಬಳಿ ದ್ವಿಚಕ್ರ ವಾಹನ ಕಳವು – ಭೂಮಾಪಕನಿಗೆ ಅಸಹ್ಯ ಅನುಭವ
ಯಲಹಂಕ, ಜುಲೈ 26:2025
ಯಲಹಂಕ ಮಿನಿ ವಿಧಾನಸೌಧದ ಬಳಿ ನಿಲ್ಲಿಸಿದ್ದ ಸರ್ಕಾರಿ ಭೂಮಾಪಕನ ದ್ವಿಚಕ್ರ ವಾಹನವನ್ನು ಕಳ್ಳರು ಕಳವು ಮಾಡಿರುವ ಘಟನೆ ದಾಖಲಾಗಿದ್ದು, ಈ ಕುರಿತು ಠಾಣೆಗೆ ಅಧಿಕೃತ ದೂರು ಸಲ್ಲಿಸಲಾಗಿದೆ.
ಪ್ರಕಾಶ್ ಎಂ ಎನ್ ಭೂಮಾಪಕರವರು ಸಹಾಯಕ ಭೂ ದಾಖಲೆಗಳ ನಿರ್ದೇಶಕರ ಕಚೇರಿ, ಮಿನಿ ವಿಧಾನಸೌಧ, ಯಲಹಂಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜುಲೈ 18 ರಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ತಮ್ಮ ಕೆಎ 20 ಇಜೆ 3778 ಸಂಖ್ಯೆಯ ದ್ವಿಚಕ್ರ ವಾಹನವನ್ನು ಕಚೇರಿ ಹತ್ತಿರ ನಿಲ್ಲಿಸಿ ಕೆಲಸಕ್ಕೆ ಒಳಗಾದ ಅವರು, ಸಂಜೆ 5.30ರ ಸುಮಾರಿಗೆ ಹೊರಬಂದಾಗ ವಾಹನ ಕಾಣೆಯಾಗಿತ್ತು.
ತಕ್ಷಣವೇ ಸುತ್ತಮುತ್ತಲ್ಲಿಯೆಲ್ಲಾ ಹುಡುಕಿದರೂ ವಾಹನ ಪತ್ತೆಯಾಗದೆ ಇದ್ದ ಕಾರಣ ಅವರು ಕಳ್ಳತನದ ಕುರಿತು ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳ್ಳರು ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು, ಆರೋಪಿಗಳನ್ನು ಶೀಘ್ರ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.
ಯಲಹಂಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳು ಪರಿಶೀಲನೆಯಲ್ಲಿದ್ದು, ಶೀಘ್ರವೇ ಯಾವುದೇ ಸುಳಿವು ಸಿಗುವ ನಿರೀಕ್ಷೆಯಿದೆ.

