ಸುದ್ದಿ 

19 ವರ್ಷದ ಯುವತಿ ನಾಪತ್ತೆ – ಬಂಧುಗಳು ಆತಂಕದಲ್ಲಿ

Taluknewsmedia.com

19 ವರ್ಷದ ಯುವತಿ ವನಶ್ರೀ ಶಶಿಕುಮಾರ್ ಎಂಬವರು ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಯುವತಿಯ ತಾಯಿ ಶ್ರೀಮತಿ ಶ್ರೀ ರಾಧಾ ರವರು ನೀಡಿದ ಮಾಹಿತಿಯಂತೆ, ವನಶ್ರೀ ಅವರು ದಿನಾಂಕ 22 ಜುಲೈ 2025 ರಂದು ಬೆಳಿಗ್ಗೆ 11:30 ಗಂಟೆಗೆ ಕಲಾಸಂಸ್ಥೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಆದರೆ ಬಳಿಕ ಮನೆಗೆ ಹಿಂತಿರುಗದೇ ನಾಪತ್ತೆಯಾಗಿದ್ದಾರೆ.

ವ್ಯಕ್ತಿಗತ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಗದೆ, ಯುವತಿಯ ಮೊಬೈಲ್ ಸಂಖ್ಯೆಗಳು (6360751265 ಮತ್ತು 7019937680) ಈ ನಡುವೆ ಸ್ವಿಚ್ ಆಫ್ ಆಗಿರುವುದರಿಂದ ಕುಟುಂಬದವರು ತೀವ್ರ ಚಿಂತೆಯಲ್ಲಿ ಇದ್ದಾರೆ. ಅವರು ತಕ್ಷಣವೇ ಸ್ಥಳೀಯ ಪೊಲೀಸರ ಶರಣಾಗಿ ಸಹಾಯ ಕೋರಿ ದೂರು ನೀಡಿದ್ದಾರೆ.

ಈ ಸಂಬಂಧ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು, ಹುಡುಕಾಟ ಕಾರ್ಯಕ್ಕೆ ಮುಂದಾಗಿದ್ದಾರೆ. ಯುವತಿಯ ಕುರಿತು ಯಾವುದೇ ಮಾಹಿತಿ ಇರುವವರು ಅಥವಾ ಕಣ್ಣಿಗೆ ಬಿದ್ದವರು ಸಮೀಪದ ಪೊಲೀಸ್ ಠಾಣೆಯೊಂದಿಗೆ ಸಂಪರ್ಕಿಸಲು ಅಧಿಕಾರಿಗಳು ವಿನಂತಿಸು ತ್ತಿದ್ದಾರೆ.

Related posts