ಸುದ್ದಿ 

ಮಹಿಳೆಗೆ ಪತಿ ಕಿರುಕುಳ – ಜೀವಭೀತಿಯೊಂದಿಗೆ ಪೊಲೀಸರಿಗೆ ದೂರು

Taluknewsmedia.com

ವಿವಾಹವಾದ ಬೆನ್ನಲ್ಲೇ ಪತಿಯ ಮನೋವೃತ್ತಿ ಬದಲಾಗಿದ್ದು, ಪತ್ನಿಗೆ ನಿರಂತರವಾಗಿ ಕಿರುಕುಳ, ಅವಾಚ್ಯ ಶಬ್ದಗಳಿಂದ ಬೈಯುವಿಕೆ, ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿರುವ ಘಟನೆ ಆನೇಕಲ್ ತಾಲೂಕಿನಲ್ಲೊಂದು ಬೆಳಕಿಗೆ ಬಂದಿದೆ. ಈ ಕುರಿತು ಪೀಡಿತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ತಾನು ಮತ್ತು ತನ್ನ ಮಗನಿಗೆ ಜೀವ ಭೀತಿಯಿದೆ ಎಂದು ಹೇಳಿದ್ದಾರೆ.

ಶ್ರೀಮತಿ ಮಂಗಳಾ ಅವರು ತಮ್ಮ ಪತಿ ವಂಕಟೇಶ್ ಕೆ. ಎಂಬವರೊಂದಿಗೆ ದಿನಾಂಕ 11-03-2019 ರಂದು ಆನೇಕಲ್ ಸಬ್-ರಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹಿತರಾಗಿದ್ದರು. ಆರಂಭದಲ್ಲಿ ಎಲ್ಲವೂ ಸರಿಯಾಗಿದ್ದರೂ, ಮದುವೆಯ ಕೆಲ ತಿಂಗಳ ನಂತರ ಪತಿಯ ನಡವಳಿಕೆಯಲ್ಲಿ ಬದಲಾವಣೆಗಳಾಗಿದ್ದು, ಮನೆಯಲ್ಲಿ ಜಗಳ, ಅವಮಾನ, ಗದರಿಕೆ, ಶಂಕೆಯ ನಡವಳಿಕೆ ಹೆಚ್ಚಾಗಿತ್ತು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈತನ ವಿರುದ್ಧ 2019ರ ಅಕ್ಟೋಬರ್ 10 ರಂದು ಬನಶಂಕರಿ ಪೊಲೀಸ್ ಠಾಣೆಯಲ್ಲಿ NCR ಸಂಖ್ಯೆ 544/2019 ರಂತೆ ದೂರು ದಾಖಲಾಗಿತ್ತು. ಪತ್ನಿ ಹಾಗೂ ಅವರ ತಂದೆ ಮತ್ತು ಮಗನ ಮೇಲೆ ಅವಾಚ್ಯ ಶಬ್ದಗಳಿಂದ ದೌರ್ಜನ್ಯ ನಡೆಸಿದ ಪತಿ, ಜಾತಿ ನಿಂದನೆಗೂ ಮುಂದಾಗಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಇತ್ತೀಚೆಗೆ, ದಿನಾಂಕ 23-07-2025 ರಂದು ಮಧ್ಯಾಹ್ನ ಸುಮಾರು 11:15ರ ಸುಮಾರಿಗೆ ಪತಿ ವಂಕಟೇಶ್, ಮಂಗಳ ಅವರ ಮನೆ ಮುಂದೆ ಬಂದು ಗದ್ದಲ ಸೃಷ್ಟಿಸಿ, ನೆರೆಹೊರೆಯವರಿಗೆ ಸಹ ಬೆದರಿಕೆ ನೀಡಿದ ಘಟನೆ ನಡೆದಿದೆ. ಬಳಿಕ ದಿನದ ಇನ್ನೊಂದು ವೇಳೆ ಬಂದು ಮನೆಯ ಬಾಗಿಲು ತಟ್ಟುತ್ತಾ ಅಪಶಬ್ದಗಳಿಂದ ಬೈದು, ದೈಹಿಕ ಹಲ್ಲೆಗೆ ಮುಂದಾಗಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮಂಗಳ ಅವರು ತಮ್ಮ ಮತ್ತು ತಮ್ಮ ಕುಟುಂಬದ ಪ್ರಾಣ ರಕ್ಷಣೆಗೆ ಭೀತಿ ವ್ಯಕ್ತಪಡಿಸಿದ್ದು, ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಈ ಕುರಿತು ಆನೇಕಲ್ ಪೊಲೀಸರು ತನಿಖೆ ಆರಂಭಿಸಿದ್ದು, ಪತಿ ವಿರುದ್ಧ IPC 498A, 504, 506 ಮತ್ತು ಇತರ ಸಂಬಂಧಿತ ವಿಧಿಗಳಡಿಯಲ್ಲಿ ಕ್ರಮ ಜರುಗಿಸಬಹುದಾಗಿದೆ.

Related posts