ಸುದ್ದಿ 

ಚಿಕ್ಕನಂದಿ ಗ್ರಾಮದಲ್ಲಿ ಜಮೀನು ವಿವಾದ: ಖರೀದಿದಾರರ ಮೇಲೆ ಜಾತಿ ನಿಂದನೆ ಹಾಗೂ ಲೈಂಗಿಕ ನಿಂದನೆಯ ಆರೋಪ

Taluknewsmedia.com

ಚಿಕ್ಕನಂದಿ ಗ್ರಾಮದಲ್ಲಿ ಜಮೀನು ವಿವಾದದ ಹಿನ್ನೆಲೆ ತೀವ್ರ ಮಟ್ಟಕ್ಕೆ ತಲುಪಿದ್ದು, ಮಹಿಳಾ ಖರೀದಿದಾರರೊಬ್ಬರು ಭದ್ರಿ ಬಿನ್ ಹರಿದಾಸ್ ಹಾಗೂ ಅವರ ಕುಟುಂಬದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಪೀಡಿತ ಮಹಿಳೆ ನೀಡಿದ ದೂರಿನಂತೆ, ಅವರು ವರ್ತೂರು ಗ್ರಾಮದ ಗಾಬರಿಲ್ ಪ್ರಕಾಶ್ ಎಂಬವರಿಂದ ಚಿಕ್ಕನಂದಿ ಗ್ರಾಮದ ಸರ್ವೆ ನಂಬರ್ 59 ರಲ್ಲಿ 1 ಎಕರೆ ಜಮೀನು ಖರೀದಿಸುವ ಒಪ್ಪಂದ ಮಾಡಿಕೊಂಡಿದ್ದಾರೆ. ಈ ವ್ಯವಹಾರದಿಗಾಗಿ ಅವರು ರೂ. 96 ಲಕ್ಷ ಪಾವತಿಸಿರುವುದಾಗಿ ತಿಳಿಸಿದ್ದಾರೆ.

ಆದರೆ, ಈ ಜಮೀನಿನಲ್ಲಿ ಭದ್ರಿ ಬಿನ್ ಹರಿದಾಸ್ ಮನೆ ನಿರ್ಮಿಸುತ್ತಿದ್ದ ಸಂದರ್ಭ, ದಿನಾಂಕ 04-07-2025ರಂದು ಮಧ್ಯಾಹ್ನ 3 ಗಂಟೆಗೆ ಈಕೆಯು ತಮ್ಮ ಸ್ನೇಹಿತರೊಂದಿಗೆ ಮಾತನಾಡಲು ಹೋದಾಗ, ಭದ್ರಿ ಮತ್ತು ಅವರ ತಂದೆ ಹರಿದಾಸ್, ಜೊತೆಗೆ ಅವರ ಅಜ್ಜಿ ಹಲ್ಲೆ ನಡೆಸಿದ್ದು, ಜಾತಿ ನಿಂದನೆ ಹಾಗೂ ಅಸಭ್ಯ ಶಬ್ದಗಳಿಂದ ನಿಂದಿಸಿದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಪಹಾಸ್ಯ ಮತ್ತು ಬೆದರಿಕೆ:
“ಸೂಳೆ ಮುಂಡೆ, ಬೇವರ್ಸಿ, ನಿಮ್ಮ ಜಾತಿಗೆ ನನ್ನ ಚಪ್ಪಲಿ ಹೊಡೆಯಬೇಕು” ಎಂಬಂತಹ ಶಬ್ದಗಳನ್ನು ಬಳಸಿರುವ ಭದ್ರಿ, “ಈ ಜಾಗ ಬೇಕಾದರೆ ನನ್ನ ತಂದೆ ಬಳಿ ಹೋಗಿ ಒಂದು ರಾತ್ರಿ ಮಲಗಿಕೋ” ಎಂಬ ಲೈಂಗಿಕ ನಿಂದನೆಗೂ ಇಳಿದಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ. ಇದೇ ಸಂದರ್ಭ, ಪೀಡಿತೆಯ ಸ್ನೇಹಿತೆಯೊಬ್ಬರಿಗೆ ಗಂಭೀರ ಗಾಯವಾಗಿದ್ದು, ಆಕೆಯನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ಯಾಂಟ್ ಬಿಚ್ಚಿ ಅಸಭ್ಯ ವರ್ತನೆ:
ದೂರು ಪ್ರಕಾರ, ಭದ್ರಿ ತಮ್ಮ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಲ್ಲದೇ, “ಈ ಗಯ್ಯಾಳಿ ಮುಂಡರನ್ನು ಹೂತು ಹಾಕೋಣ” ಎಂದು ತನ್ನ ಸಂಗಡಿಗರೊಂದಿಗೆ ಕಿರುಕುಳ ನೀಡಿದ್ದಾರೆ. ಘಟನೆಯಲ್ಲಿ ಭದ್ರಿಯೊಂದಿಗೆ 10ಕ್ಕೂ ಹೆಚ್ಚು ಅಪರಿಚಿತರು ಭಾಗಿಯಾಗಿದ್ದರು ಎನ್ನಲಾಗಿದೆ.

ಪೊಲೀಸ್ ತನಿಖೆ ಪ್ರಾರಂಭ:
ಪೀಡಿತೆಯು ಆನೇಕಲ್ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದು, ಆರೋಪಿಗಳ ವಿರುದ್ಧ SC/ST ಅಟ್ಟ್ರಾಸಿಟಿ ಕಾಯ್ದೆ, ಲೈಂಗಿಕ ಕಿರುಕುಳ, ಬೆದರಿಕೆ ಹಾಗೂ ಅವಾಚ್ಯ ಶಬ್ದ ಬಳಕೆ ಕುರಿತಂತೆ ಕಾನೂನು ಕ್ರಮ ಕೈಗೊಳ್ಳುವಂತೆ ಮ�

Related posts