ಸುದ್ದಿ 

ಕಾರಿಗೆ ಡಿಕ್ಕಿ: ಅಪಘಾತದ ಬಳಿಕ repari ಭರವಸೆ – ಆದರೆ ಕ್ರಮವಿಲ್ಲ

Taluknewsmedia.com

ಕೋಡಿಗೆಹಳ್ಳಿ ಸರ್ವಿಸ್ ರಸ್ತೆಯ ಬಳಿ ನಡೆದ ಅಪಘಾತದಲ್ಲಿ ಕಾರಿಗೆ ಹಾನಿ ಸಂಭವಿಸಿದ್ದು, ಸಂಬಂಧಪಟ್ಟ ವಾಹನದ ಮಾಲೀಕರು ರಿಪೇರಿ ಮಾಡಿಸುತ್ತೇವೆ ಎಂದು ಭರವಸೆ ನೀಡಿದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ದೂರನ್ನು ನಾಗರಿಕರು ನೀಡಿದ್ದಾರೆ.

ನಿತ್ಯ ರಾಜರವರು ತಮ್ಮ ಪತ್ನಿಯನ್ನು ಕಾರಿನಲ್ಲಿ ಕೂರಿಸಿಕೊಂಡು, ಕಾರ್ ನಂಬರ್ KA-02-MU-3421 ನಲ್ಲಿ ಯಲಹಂಕದಿಂದ ಇಂದಿರಾನಗರದ ಕಡೆಗೆ ಸಾಗುತ್ತಿದ್ದರು. ಸಂಜೆ ಸುಮಾರು 5:40ರ ಸಮಯದಲ್ಲಿ ಅವರು ಕೋಡಿಗೆಹಳ್ಳಿ ಜಂಕ್ಷನ್ ಹತ್ತಿರದ ಸರ್ವಿಸ್ ರಸ್ತೆಯಲ್ಲಿ ಸಾಗುತ್ತಿರುವಾಗ KA-50-B-4707 ಸಂಖ್ಯೆಯ ಇನ್ನೊಂದು ವಾಹನ ಬಲಭಾಗದಿಂದ ಡಿಕ್ಕಿ ಹೊಡೆದಿದೆ.

ಅಪಘಾತದ ಪರಿಣಾಮ ನಿತ್ಯ ರಾಜ ರವರ ಕಾರಿನ ಬಲಭಾಗದ ಮುಂಭಾಗದ ಬಾಗಿಲು, ಹಿಂದಿನ ಬಾಗಿಲು, ಬಂಪರ್ ಮತ್ತು ಇತರೆ ಭಾಗಗಳಲ್ಲಿ ಗಂಭೀರ ಹಾನಿ ಸಂಭವಿಸಿದೆ. ಸ್ಥಳದಲ್ಲಿಯೇ ಪ್ರತಿಕ್ರಿಯೆ ನೀಡಿದ ಚಾಲಕರು “ವಾಹನದ ಮಾಲೀಕರು ನಿಮ್ಮ ಕಾರು ರಿಪೇರಿ ಮಾಡಿಸುತ್ತಾರೆ” ಎಂದು ತಿಳಿಸಿದರೂ, ತಕ್ಷಣದ ಯಾವುದೇ ಪರಿಹಾರ ದೊರಕಿಲ್ಲ.

“ನಾವು ವಿಶ್ವಾಸವಿಟ್ಟು ಕಾಯುತ್ತಿದ್ದೆವು, ಆದರೆ ಈವರೆಗೆ ಯಾರಿಂದಲೂ ಯಾವುದೇ ಕ್ರಮವಿಲ್ಲ. ಹೀಗಾಗಿ ಪೊಲೀಸರು ಸ್ಪಂದನೆ ನೀಡಬೇಕು ಎಂಬ ಆಧಾರದ ಮೇಲೆ ನಾವು ದೂರು ನೀಡಿದ್ದೇವೆ,” ಎಂದು ದೂರುದಾರರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸಂಬಂಧಿತ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸ್ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಅಪಘಾತಕ್ಕೆ ಕಾರಣವಾದ ವಾಹನದ ಚಾಲಕನ ಪತ್ತೆ ಮತ್ತು ದುರಸ್ತಿ ಸಂಬಂಧ ಹೆಚ್ಚಿನ ವಿವರಗಳನ್ನು ನ್ಯಾಯೋಪಾಯವಾಗಿ ಪರಿಶೀಲನೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Related posts