ಬೆಂಗಳೂರು: ನಿವೇಶನ ಮಾರಾಟದಲ್ಲಿ 40 ಲಕ್ಷ ರೂ. ವಂಚನೆ – ಕೊಲೆ ಬೆದರಿಕೆ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ಪ್ರಕರಣ ಪ್ರಕರಣ
ಬೆಂಗಳೂರು, ಜುಲೈ 28
: ನಿವೇಶನ ಖರೀದಿಗಾಗಿ 40 ಲಕ್ಷ ರೂ. ಹಣ ಪಾವತಿಸಿದ ವ್ಯಕ್ತಿಗೆ ನೊಂದಾಯಿತ ದಾಖಲೆ ನೀಡದೆ ಮೋಸ ಮಾಡಿರುವ ಪ್ರಕರಣವು ಯಲಹಂಕದ ಕೋಗಿಲು ಲೇಔಟ್‌ನಲ್ಲಿ ನಡೆದಿದ್ದು, ಇಬ್ಬರು ಆರೋಪಿಗಳ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.
ಭರತ್ ಬಿ ರ್ ಪ್ರಕಾರ, ಅವರು ಕಿಶೋರ್ ಪಟೇಲ್ ಎಂಬುವವರಿಂದ 4.34 ಕೋಟಿ ರೂ.ಗೆ ನಿವೇಶನ ಖರೀದಿಗೆ ಒಪ್ಪಂದ ಮಾಡಿಕೊಂಡು, ಮೊದಲ ಹಂತದಲ್ಲಿ 40 ಲಕ್ಷ ರೂ. ಪಾವತಿಸಿದ್ದಾರೆ. ಆದರೆ, ನಿಗದಿಯಂತೆ ಮಾರಾಟದ ನೊಂದಣಿ ಮಾಡದೆ ಸಮಯ ತಡಮಾಡಿ, ನಂತರ ಅವರ ಮಗ ಹರೀಶ್ ಪಟೇಲ್ ಹಕ್ಕು ಹಂಚಿಕೊಂಡಿರುವುದಾಗಿ ತಿಳಿಸಿದ್ದಾರೆ.
ಇದನ್ನು ಪ್ರಶ್ನಿಸಿದಾಗ ಇಬ್ಬರು, ಭರತ್ ಅವಾಚ್ಯ ಶಬ್ದಗಳಿಂದ ನಿಂದಿಸಿ, ಸ್ಥಳೀಯ ರೌಡಿಗಳ ಸಹಾಯದಿಂದ ಕೊಲೆ ಮಾಡುವ ಬೆದರಿಕೆ ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಕಿಶೋರ್ ಪಟೇಲ್ ಮತ್ತು ಹರೀಶ್ ಪಟೇಲ್ ವಿರುದ್ಧ ಮೋಸ, ನಿಂದನೆ ಮತ್ತು ಜೀವ ಬೆದರಿಕೆ ಆರೋಪದಡಿ ಎಫ್‌ಐಆರ್ ದಾಖಲಿಸಲಾಗಿದೆ. ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.

