ಬೆಂಗಳೂರು: ಉದ್ಯೋಗಸ್ಥನ ಲ್ಯಾಪ್‌ಟಾಪ್ ಕಳವು – ₹1.5 ಲಕ್ಷ ನಷ್ಟ
ಬೆಂಗಳೂರು, ಜುಲೈ 28 – 2025
ನಗರದ ನಾಗವಾರದ ಮಣಿತೇಜ ಬೂರ್ಲಾ ಎಂಬವರು ತಮ್ಮ ಲ್ಯಾಪ್‌ಟಾಪ್ ಕಳವಾಗಿರುವ ಬಗ್ಗೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅವರು ನೀಡಿದ ದೂರಿನ ಪ್ರಕಾರ, ಡೆಲ್ ಕಂಪನಿಯ 5450 ಮಾದರಿಯ ಲ್ಯಾಪ್‌ಟಾಪ್ (Serial Number: GD6RL84) ಅನ್ನು ಯಾರೋ ಅಜ್ಞಾತ ವ್ಯಕ್ತಿಗಳು ಕದ್ದೊಯ್ಯಲಾಗಿದೆ.
ಮಣಿತೇಜ ಅವರು ಕೆಲಸಮಾಡುತ್ತಿರುವ ಎ.ಎನ್.ಝಡ್ ಸಪೋಟರ್ ಸರ್ವೀಸ್ ಕಂಪನಿಗೆ ಸೇರಿದ ಈ ಲ್ಯಾಪ್‌ಟಾಪ್‌ನ ಅಂದಾಜು ಮೌಲ್ಯ ₹1,50,000 ಆಗಿದ್ದು, ಜುಲೈ 24 ರಂದು ಬೆಳಿಗ್ಗೆ 11:30 ರಿಂದ ಜುಲೈ 25 ರಂದು ಸಂಜೆ 3:40ರ ನಡುವೆ ಕಳವಾಗಿದೆ ಎಂದು ಅವರು ತಿಳಿಸಿದ್ದಾರೆ.
ವಿದ್ಯಾರಣ್ಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಳ್ಳರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಈ ಕುರಿತು ಮುಂದಿನ ತನಿಖೆ ನಡೆಯುತ್ತಿದೆ

