ಸುದ್ದಿ 

ಬೈಕ್ ಕಳವು: ವ್ಯಾಪಾರಸ್ಥರಿಂದ ಯಲಹಂಕ ಪೊಲೀಸ್ ಠಾಣೆಗೆ ದೂರು

Taluknewsmedia.com

ಬೆಂಗಳೂರು, ಜುಲೈ 28:2025
ಯಲಹಂಕದ ಕೋಗಿಲು ಕ್ರಾಸ್ ಪ್ರದೇಶದಲ್ಲಿ ವ್ಯಾಪಾರಕ್ಕಾಗಿ ಇಡಲಾಗಿದ್ದ ಬೈಕ್‌ವೊಂದು ಕಳವಾಗಿರುವ ಘಟನೆ ನಡೆದಿದೆ.

ವ್ಯಾಪಾರಸ್ಥರಾದ ಶ್ರೀ ವಿಷ್ಣು ಬಂಜಾರ ಅವರು ನೀಡಿದ ದೂರಿನ ಪ್ರಕಾರ, ಅವರು ಕೋಗಿಲು ಕ್ರಾಸ್‌ನ ರಘು ಎಂಬವರ ಜಾಗದಲ್ಲಿ ಬೆಡ್‌ಶೀಟ್ ವ್ಯಾಪಾರ ಮಾಡುತ್ತಿದ್ದಾರೆ. ಜುಲೈ 14 ರಂದು ಬೆಳಿಗ್ಗೆ 10 ಗಂಟೆಯ ವೇಳೆಗೆ ತಮ್ಮ ಸೈಂಡ್ಲರ್ ಬೈಕ್ (ಸಂಖ್ಯೆ: 5 14 8333) ಅನ್ನು ವ್ಯಾಪಾರದ ಜಾಗದ ಶೆಡ್‌ ಬಳಿ ನಿಲ್ಲಿಸಲಾಗಿತ್ತು. ಆದರೆ ಜುಲೈ 15 ರಂದು ಬೆಳಿಗ್ಗೆ 6 ಗಂಟೆಗೆ ನೋಡಿದಾಗ ಬೈಕ್ ಕಾಣೆಯಾಗಿದ್ದು, ಎಲ್ಲೆಡೆ ಹುಡುಕಿದರೂ ಪತ್ತೆಯಾಗಿಲ್ಲ.

ಅವರು ಶಂಕಿಸುವಂತೆ, ಅಪರಿಚಿತ ಕಳ್ಳರು ಬೈಕ್ ಕಳವು ಮಾಡಿಕೊಂಡಿರಬಹುದೆಂದು ಅವರು ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Related posts