ಸುದ್ದಿ 

ಮನೆಯೊಳಗೆ ಕಳ್ಳತನ: ಲ್ಯಾಪ್‌ಟಾಪ್, ಮೊಬೈಲ್ ಕಳವು

Taluknewsmedia.com

ಬೆಂಗಳೂರು, ಜುಲೈ 28: 2025
ಯಲಹಂಕದ ನಿವಾಸಿಯೊಬ್ಬರ ಮನೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಬೆಳಿಗ್ಗೆ ವೇಳೆ ದ್ವಾರ ಮುರಿದು ಒಳಪ್ರವೇಶಿಸಿ ಲ್ಯಾಪ್‌ಟಾಪ್ ಹಾಗೂ ಮೊಬೈಲ್‌ಗಳನ್ನು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ವಿಜಯ್ ಕುಮಾರ್ ಅವರ ಪ್ರಕಾರ, ಜುಲೈ 25ರಂದು ಬೆಳಗ್ಗೆ ಸುಮಾರು 6.20ರ ಸುಮಾರಿಗೆ ಅಪರಿಚಿತ ಅಸಾಮಿ ಮನೆಯೊಳಗೆ ನುಗ್ಗಿ, ಅವರ ಮಗಳ ಕೊಠಡಿಯಲ್ಲಿ ಇಡಲಾಗಿದ್ದ ಡೆಲ್ ಕಂಪನಿಯ ಲ್ಯಾಪ್‌ಟಾಪ್ ಹಾಗೂ ವಿವೋ ಮೊಬೈಲ್ ಅನ್ನು ಕಳ್ಳತನ ಮಾಡಿದ್ದಾನೆ. ಈ ಸಂದರ್ಭ ವಿಜಯ್ ಕುಮಾರ್ ಅವರು ಸ್ನಾನಕ್ಕೆ ಹೋಗಿದ್ದಾಗ ಮನೆಯ ಬಾಗಿಲು ಲಾಕ್ ಮಾಡಲಾಗಿತ್ತು. ಸಿಸಿ ಟಿವಿ ಕ್ಯಾಮೆರಾದಲ್ಲಿ ಕಳ್ಳತನದ ದೃಶ್ಯಗಳು ದಾಖಲಾಗಿವೆ.

ಕಳವಾದ ವಸ್ತುಗಳ ಮೌಲ್ಯ ಸುಮಾರು ₹40,000 ಎಂದು ಅಂದಾಜಿಸಲಾಗಿದೆ.affected

ಈ ಸಂಬಂಧ ಯಲಹಂಕ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅಪರಿಚಿತ ಕಳ್ಳನನ್ನು ಗುರುತಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಜಯ್ ಕುಮಾರ್ ಮನವಿ ಮಾಡಿದ್ದಾರೆ.

Related posts