ಸುದ್ದಿ 

ಸರ್ಜಾಪುರರಸ್ತೆ ಬಳಿ ಭೀಕರ ಬೈಕ್ ಅಪಘಾತ – ಯುವಕ ಸ್ಥಳದಲ್ಲೇ ಸಾವು, ಮತ್ತೊಬ್ಬ ಗಾಯಗೊಂಡು ಆಸ್ಪತ್ರೆಗೆ ದಾಖಲೆ

Taluknewsmedia.com

ಸರ್ಜಾಪುರ, ಜುಲೈ 29, 2025:
ಸರ್ಜಾಪುರ-ಬಾಗಲೂರು ರಸ್ತೆಯ ಸರ್ಜಾಪುರ ಬಾರ್ಡರ್ ಬಳಿ ಭೀಕರ ಮೋಟಾರ್ ಸೈಕಲ್ ಅಪಘಾತ ಸಂಭವಿಸಿದ್ದು, 26 ವರ್ಷದ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈತನ ಜೊತೆಯಲ್ಲಿದ್ದ ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡು ಸರ್ಜಾಪುರ ಟೌನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ವ್ಯಕ್ತಿಯನ್ನು ಪಶ್ಚಿಮ ಬಂಗಾಳ ರಾಜ್ಯದ ಗೌನ್ ನಗರ ಮೂಲದ ಹರಿಕೃಷ್ಣ ಗುರಿಯ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಬಪ್ಪ ಸರ್ಕಾರ್ ಎಂದು ಗುರುತಿಸಲಾಗಿದೆ. ಇಬ್ಬರೂ ಕಳೆದ 5-6 ತಿಂಗಳಿಂದ ಸರ್ಜಾಪುರ ಟೌನ್‌ನ ಹರ್ಬನ್ ಗ್ರೀನ್ ವಿಲಾಸ್ ಹಿಂಭಾಗದ ಕಟ್ಟಡ ನಿರ್ಮಾಣದ ಸ್ಥಳದಲ್ಲಿ ಸೆಂಟ್ರಿಂಗ್ ಕೆಲಸ ಮಾಡಿಕೊಂಡು ವಾಸಿಸುತ್ತಿದ್ದರು.

ಅಪಘಾತದ ವಿವರ:
ದಿನಾಂಕ 28-07-2025ರಂದು ಮಧ್ಯಾಹ್ನ ಸುಮಾರು 2:00 ಗಂಟೆ ವೇಳೆಗೆ, ಹರಿಕೃಷ್ಣ ಗುರಿಯ ಹಾಗೂ ಬಪ್ಪ ಸರ್ಕಾರ್ ತಮಿಳುನಾಡು ಬಾರ್ಡರ್ ಭಾಗದಿಂದ ಮೀನನ್ನು ತಂದುಕೊಳ್ಳಲು ಹೋಗಿ ಮೋಟಾರ್ ಸೈಕಲ್ ಮೂಲಕ ವಾಪಸ್ಸು ಬರುತ್ತಿದ್ದರು. ಈ ವೇಳೆ ಹರಿಕೃಷ್ಣ ಗುರಿಯನು ಕೆಎ-07-ಇಇ-0558 ಸಂಖ್ಯೆಯ ಬೈಕ್ ಅನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡುತ್ತಿದ್ದಾಗ, ಸರ್ಜಾಪುರ ಬಾರ್ಡರ್ ಬಳಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.

ಅಪಘಾತದ ಪರಿಣಾಮವಾಗಿ ಹರಿಕೃಷ್ಣ ಗುರಿಯ ಎದೆ ಹಾಗೂ ಅಂಗಾಂಗಗಳಿಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಜೊತೆಯಲ್ಲಿದ್ದ ಬಪ್ಪ ಸರ್ಕಾರ್‌ಗೆ ಕೈ ಕಾಲುಗಳಿಗೆ ಗಾಯವಾಗಿದ್ದು, ಸ್ಥಳೀಯರು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪೊಲೀಸರ ಕ್ರಮ:
ಸರ್ಜಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತ ಸಂಬಂಧಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ. ಅಪಘಾತದ ಸ್ಥಳದಲ್ಲಿ ಮೋಟಾರ್ ಸೈಕಲ್ ಜಖಂಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

Related posts