ಮೆರವಣಿಗೆಯಲ್ಲಿ ಜಗಳ – ಮೂವರು ವಿರುದ್ಧ ಎಫ್‌ಐಆರ್
ಬೆಂಗಳೂರು, ಜುಲೈ 31:2025
ನಗರದ ಯಲಹಂಕ ಸಮೀಪದ ಮರಿಯಣಪಾಳ್ಯದಲ್ಲಿ ನಡೆದ ಸಂತ ಯಾಗಪ್ಪರ ಹಬ್ಬದ ತೇರಿನ ಮೆರವಣಿಗೆಯಲ್ಲಿ ಜಗಳ ಸಂಭವಿಸಿದ್ದು, ಇದರಲ್ಲಿ ಭಾಗಿಯಾದ ಮೂವರ ವಿರುದ್ಧ ಅಮೃತಳ್ಳಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಚಂದ್ರು ಅವರ ವರದಿಯ ಪ್ರಕಾರ, ಅವರು ದಿನಾಂಕ 27-07-2025ರಂದು ತಮ್ಮ ಪತ್ನಿ ಕೃಷ್ಣವೇಣಿ, ಅತ್ತಿಗೆ ಅನಿತಾ ಹಾಗೂ ಅಣ್ಣನ ಮಗ ಕಿಶೋರ್ ಜೊತೆ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದರು. ಬೆಳಿಗ್ಗೆ ಸುಮಾರು 9:30ರ ಸುಮಾರಿಗೆ ಮೆರವಣಿಗೆ ಮರಿಯಣಪಾಳ್ಯ ಸರ್ಕಲ್ ಬಳಿ ತಲುಪಿದಾಗ, ರಾಜಪ್ಪ, ಪೀಟರ್ ಮತ್ತು ಪ್ರಶಾಂತ್ ಎಂಬವರು ಇವರನ್ನು ಅಡ್ಡಗಟ್ಟಿ, ಕಿಶೋರ್ ಅನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ನಿಂದನೆ ನಡೆಸಿದ್ದಾರೆ.
ಈ ವೇಳೆ ಪ್ರತಿಸ್ಪಂದನೆ ನೀಡಿದ ಚಂದ್ರು ಅವರ ಕುಟುಂಬದ ಮೇಲೆ ಮೂವರು ಕೈಗಳಿಂದ ಹಲ್ಲೆ ಮಾಡಿ ಗಂಭೀರ ಗಾಯಮಾಡಿದ್ದಾರೆ. ಈ ಹಲ್ಲೆಯಿಂದ ಚಂದ್ರು ಅವರ ಪತ್ನಿಗೆ ತೀವ್ರ ಪೆಟ್ಟು ಬಿದ್ದು ಅವರನ್ನು ಯಲಹಂಕದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಅಲ್ಲದೆ, ಪೊಲೀಸರು ಭೇಟಿಯಾಗಿದರೆ ಬಿಟ್ಟುಕೊಡದೆ ಜೀವ ಬೆದರಿಕೆ ನೀಡುವಂತೆ ಆರೋಪಿಸಲಾಗಿದೆ. ಘಟನೆ ಬಗ್ಗೆ ಸಂಬಂಧಿಕರ ಸಲಹೆಯ ಮೇರೆಗೆ ದಿನಾಂಕ 27ರಂದು ತಡವಾಗಿ ಅಮೃತಳ್ಳಿಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

