ಪೀಣ್ಯದಲ್ಲಿ BMTC ಬಸ್ ಡಿಕ್ಕಿ: 21 ವರ್ಷದ ಯುವಕ ಸ್ಥಳದಲ್ಲೇ ದುರ್ಮರಣ
ಬೆಂಗಳೂರು, ಜುಲೈ 29 (ಮಂಗಳವಾರ): ಪೀಣ್ಯ ಎನ್.ಟಿ.ಟಿ.ಎಫ್ ರಸ್ತೆ ಬಳಿ ಮಂಗಳವಾರ ಬೆಳಗ್ಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದೇವಿಂದ್ರಪ್ಪ (21) ಎಂಬ ಯುವಕ ಬೈಕ್ ಸಮೇತ ಬಿದ್ದು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ.
ಮೃತ ದೇವಿಂದ್ರಪ್ಪ, ಪೀಣ್ಯ ಪ್ರದೇಶದ ನಿವಾಸಿಯಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದ. ಅವನು ದಿನಾಂಕ 29-07-2025 ರಂದು ಬೆಳಗ್ಗೆ 8.00 ಗಂಟೆಗೆ ತನ್ನ ಬೈಕ್ (ಸೈಂಡರ್ ಬೈಕ್ ನಂ: KA-33-EA-8498) ಮೂಲಕ ಗಾರೆ ಕೆಲಸಕ್ಕೆ ಹೋಗಿದ್ದನು. ಆದರೆ ಕೆಲವೇ ಹೊತ್ತಿನಲ್ಲಿ ಪೀಣ್ಯ ಸಂಚಾರ ಪೊಲೀಸರು ಫೋನ್ ಮೂಲಕ ಅಪಘಾತದ ಮಾಹಿತಿ ನೀಡಿ ಪೋಷಕರನ್ನು ಘಟನಾ ಸ್ಥಳಕ್ಕೆ ಕರೆಯಿದರು.
ತಂದೆ ಮೈಲಾರಿ ಅವರು ಸ್ಥಳಕ್ಕೆ ಧಾವಿಸಿ ನೋಡಿದಾಗ, ದೇವಿಂದ್ರಪ್ಪನು ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿರುವುದು ದೃಢಪಟ್ಟಿತು. ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ, ಪೀಣ್ಯ ಎನ್.ಟಿ.ಟಿ.ಎಫ್ ರಸ್ತೆ ಮೇಲೆ ಟಿ.ವಿ.ಎಸ್ ಕ್ರಾಸ್ ಕಡೆಗೆ ಸಾಗುತ್ತಿದ್ದ ದೇವಿಂದ್ರಪ್ಪನ ಬೈಕಿಗೆ BMTC ಸಂಸ್ಥೆಯ ಎಲೆಕ್ಟ್ರಿಕಲ್ ಬಸ್ (ನಂ: KA-51-AK-4207) ಅತಿವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡುತ್ತಿದ್ದ ಚಾಲಕ ವರ್ದಮಾನ್ ಪದ್ಮಣಪ್ಪ ಚಿಂದ (30) ಡಿಕ್ಕಿ ಹೊಡೆದಿದ್ದ. ಪರಿಣಾಮ ದೇವಿಂದ್ರಪ್ಪನು ರಸ್ತೆ ಮೇಲೆ ಬಿದ್ದು, ಬಸ್‌ನ ಮುಂದಿನ ಬಲಚಕ್ರ ದಾಳಿ ಮಾಡಿ ತಲೆ ಮತ್ತು ಬಲಗಾಲಿಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

