ಸುದ್ದಿ 

ಚಾಲಕನಾಗಿ ಕೆಲಸ ಮಾಡುತ್ತಿದ್ದ 20 ವರ್ಷದ ಯುವಕ ನಾಪತ್ತೆ: ಕುಟುಂಬಸ್ಥರಿಂದ ಆತಂಕ

Taluknewsmedia.com

ಕೆಜಿ ಹಳ್ಳಿ ನಿವಾಸಿ, 20 ವರ್ಷದ ವಿನಯ್ ಕುಮಾರ್ ಎಂಬ ಯುವಕ ಕಳೆದ 13 ದಿನಗಳಿಂದ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತಂತೆ ಅವರ ಸೋದರಿಯವರುಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅಂಜಲಿಯವರ ಪ್ರಕಾರ, ವಿನಯ್ ಕುಮಾರ್ ಚಾಲಕನಾಗಿ ಕೆಲಸ ಮಾಡುತ್ತಿದ್ದು, ದಿನಾಂಕ 18-07-2025 ರಂದು ಎಂದಿನಂತೆ ಕೆಲಸಕ್ಕೆ ತೆರಳಿದ್ದರು. ಆದರೆ ಆ ದಿನದ ನಂತರದಿಂದ ಇವತ್ತಿನವರೆಗೆ ಅವರು ಮನೆಗೆ ಮರಳಿಲ್ಲ. ಅದೇ ದಿನ ರಾತ್ರಿ ಅವರ ಮೊಬೈಲ್ ಸಂಖ್ಯೆಗಳಿಗೂ ಕರೆ ಮಾಡಿದಾಗ ಫೋನುಗಳು ಸ್ವಿಚ್ ಆಫ್ ಆಗಿವೆ. ವಿನಯ್ ಕುಟುಂಬದವರೊಂದಿಗೆ ಸಂಪರ್ಕ ಕೂಡ ಸಾಧಿಸಿಲ್ಲ.

ಅಂಜಲಿ ಅವರು ನೀಡಿದ ಮಾಹಿತಿಯಂತೆ, ವಿನಯ್‌ಗೆ ಕನ್ನಡ ಸ್ವಲ್ಪ ಬರುವುದು ಹಾಗೂ ಹಿಂದಿಯಲ್ಲಿ ಚೆನ್ನಾಗಿ ಮಾತನಾಡುತ್ತಾರೆ. ಅವರಿಗೆ ಯಾವುದೇ ಸ್ನೇಹಿತರು ಇಲ್ಲ, ಮತ್ತು ಎಲ್ಲೆಡೆ ಹುಡುಕಿದರೂ ಯಾವುದೇ ಮಾಹಿತಿ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ತಮ್ಮ ತಮ್ಮನನ್ನು ಪತ್ತೆ ಹಚ್ಚುವಂತೆ ಅವರು ಪೊಲೀಸರಲ್ಲಿ ದೂರು ನೀಡಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದು, ಯುವಕನ ಪತ್ತೆಗೆ ಸಾರ್ವಜನಿಕರಿಂದ ಸಹಕಾರ ಕೇಳಿಕೊಳ್ಳಲಾಗಿದೆ.

Related posts