ಸುದ್ದಿ 

ಮಾದಕ ವಸ್ತು ಮಾರಾಟಕ್ಕೆ ಯತ್ನ: ತೆಲಂಗಾಣ ಮೂಲದ ವ್ಯಕ್ತಿಯಿಂದ 990 ಗ್ರಾಂ ಗಾಂಜಾ ವಶ – ಗಂಗಮ್ಮನ ಗುಡಿ ಪೊಲೀಸ್ ದಾಳಿ.

Taluknewsmedia.com

ಬೆಂಗಳೂರು, ಜುಲೈ 01 – ನಗರದ ಕೆ.ಜಿ.ಹಳ್ಳಿ ವ್ಯಾಪ್ತಿಯ ಅಂಗಾಳಪರಮೇಶ್ವರಿ ದೇವಸ್ಥಾನ ರಸ್ತೆ (ರೈಲ್ವೆ ಪ್ಯಾರಲಲ್ ರಸ್ತೆಯ ಬಳಿ) ಪಾಳು ಬಿದ್ದ ಮನೆಯಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 990 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ದಿನಾಂಕ 29-07-2025 ರಂದು ಮಧ್ಯಾಹ್ನ 3:05ಕ್ಕೆ ಪಿಎಸ್‌ಐ ಕವೀಶ್.ಎಸ್ ಅವರಿಗೆ ಬಾತ್ಮೀದಾರರಿಂದ ಮಾಹಿತಿ ದೊರಕಿದ್ದು, ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡಲಾಗುತ್ತಿದೆ ಎಂಬುದರ ಬಗ್ಗೆ ಖಚಿತ ವರದಿ ಸಿಕ್ಕಿತು. ಅವರು ACP ಪೀಣ್ಯ ಉಪ ವಿಭಾಗದ ಅನುಮತಿ ಪಡೆದು, ಸಿಬ್ಬಂದಿ ಹಾಗೂ ಪಂಚರೊಂದಿಗೆ ಸ್ಥಳಕ್ಕೆ ತೆರಳಿದರು.

ಮಧ್ಯಾಹ್ನ 3:30ಕ್ಕೆ ನಡೆದ ದಾಳಿಯ ವೇಳೆ, ಸಿಮೆಂಟ್ ಬಣ್ಣದ ಪ್ಯಾಂಟ್ ಮತ್ತು ಜರ್ಕೀನ್ ಧರಿಸಿದ್ದ ವ್ಯಕ್ತಿಯೊಬ್ಬ ಬೂದು ಬಣ್ಣದ ಬ್ಯಾಗ್‌ನೊಂದಿಗೆ ಪಾಳು ಮನೆಯ ಬಳಿ ಶಂಕಿತವಾಗಿ ನಿಂತಿದ್ದನು. ಪೊಲೀಸರು ಹತ್ತಿರ ಹೋಗುತ್ತಲೇ, ಆತನು ಓಡಿ ಪಾಳು ಮನೆಯ ಓಣಿಯೊಳಗೆ ಜಾರಿ ಹೋಗಿದ್ದು, ಪೊಲೀಸರು ಆತನನ್ನು ಹಿಡಿದಿದ್ದಾರೆ.

ಬಂಧಿತನನ್ನು ಕಾನುಗುಲ ಪ್ರಸಾದ್ ಬಿನ್ ನರಸಿಂಹಲು (35 ವರ್ಷ), ಮೂಲತಃ ಬಾಡಿ ಗ್ರಾಮ, ಮೋಪಲ್ ಮಂಡಲ, ನಿಜಾಮಾಬಾದ್ ಜಿಲ್ಲೆ, ತೆಲಂಗಾಣ ಎಂದು ಗುರುತಿಸಲಾಗಿದೆ. ಆತನು ಮಹಾರಾಷ್ಟ್ರದ ನಾಂದೇಡ್ನಿಂದ ಅಪರಿಚಿತ ವ್ಯಕ್ತಿಗಳಿಂದ ಗಾಂಜಾ ಪಡೆದು, ಗಿರಾಕಿಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ಬೆಂಗಳೂರಿಗೆ ತಂದಿರುವುದಾಗಿ ಒಪ್ಪಿಕೊಂಡಿದ್ದಾನೆ.

ಆತನ ಬಳಿಯ ಬ್ಯಾಗ್ ಪರಿಶೀಲನೆ ನಡೆಸಿದಾಗ, ಅದರೊಳಗೆ ಎಲೆ, ಕಾಂಡ, ಬೀಜಗಳಿಂದ ಕೂಡಿದ ಅರೆ ಹಸಿ ಗಾಂಜಾ ಪತ್ತೆಯಾಯಿತು. ತೂಕದ ಯಂತ್ರದಿಂದ ತೂಗಿದಾಗ, ಗಾಂಜಾ ಪ್ಲಾಸ್ಟಿಕ್ ಕವರ್ ಸಮೇತ 990 ಗ್ರಾಂ ಇರುವುದು ದೃಢಪಟ್ಟಿದೆ.

ಆಸಾಮಿಯಿಂದ ಗಾಂಜಾ ವಶಪಡಿಸಿಕೊಂಡು, ಪ್ರಕರಣವನ್ನು NDPS Act ಸೆಕ್ಷನ್ 20(b)(ii)(A) ಅಡಿಯಲ್ಲಿ ದಾಖಲಿಸಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗುತ್ತಿದೆ.

Related posts