ಸುದ್ದಿ 

ಕಾರು ಚಕ್ರ ಕಳವು ಪ್ರಕರಣ: 3 ಮಹೇಂದ್ರ ಎಕ್ಸ್‌ಯು.ವಿ-400 ವಾಹನಗಳ ಟೈರ್‌ಗಳು ಕದ್ದೊಯ್ಯಲಾಗಿದೆ

Taluknewsmedia.com

ಬೆಂಗಳೂರು, ಆಗಸ್ಟ್ 2: 2025
ಬೆಂಗಳೂರಿನ ಬೇಗೂರು ಗ್ರಾಮದಲ್ಲಿ ರಿಪೇಶ್ ಗ್ರೀನ್ ಮೊಬಿಲಿಟಿ ಲಿಮಿಟೆಡ್ ಕಂಪನಿಯ ಮೂರು ಎಲೆಕ್ಟ್ರಿಕ್ ಕಾರುಗಳ ಟೈರ್‌ಗಳನ್ನು ಅಪರಿಚಿತ ದುಷ್ಕರ್ಮಿಗಳು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಕಳೆದ 10 ವರ್ಷಗಳಿಂದ ಲೀಗಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಕಂಪನಿಯ ಉದ್ಯೋಗಿ ವ್ಯಕ್ತಿಯೊಬ್ಬರು, ಈ ಸಂಬಂಧ ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರುದಾರರು ತಮ್ಮ ಕಂಪನಿಯ ವಾಹನಗಳು – ಮೂರು ಮಹೇಂದ್ರ ಎಕ್ಸ್‌ಯು.ವಿ-400 ಮಾದರಿಯ ಕಾರುಗಳನ್ನು, ಬೇಗೂರು ಗ್ರಾಮದಲ್ಲಿರುವ ಸರ್ವೆ ನಂ. 6/1 ಮತ್ತು 6/2 ರಲ್ಲಿ ಸ್ಥಿತಿರುವ ಪಾರ್ಕಿಂಗ್ ಪ್ರದೇಶದಲ್ಲಿ 09/07/2025 ರಂದು ಬೆಳಗ್ಗೆ ಸುಮಾರು 11.30 ಗಂಟೆಗೆ ನಿಲ್ಲಿಸಿದ್ದರು.

ಆದರೆ, ನಂತರ 10/07/2025 ರಂದು ರಾತ್ರಿ ಸುಮಾರು 1 ಗಂಟೆ ಸಮಯದಲ್ಲಿ, ವಾಹನಗಳ ಬಲಭಾಗದ ಎರಡು ಚಕ್ರಗಳನ್ನು ಯಾರೋ ಅಪರಿಚಿತ ವ್ಯಕ್ತಿಗಳು ಕಳವು ಮಾಡಿದ್ದು, ಒಟ್ಟು ಆರು ಟೈರ್‌ಗಳನ್ನು ಕದ್ದೊಯ್ಯಲಾಗಿದೆ ಎಂದು ವರದಿಯಾಗಿದೆ. ಕಳುವಾದ ಚಕ್ರಗಳ ಒಟ್ಟು ಮೌಲ್ಯವು ಸುಮಾರು ₹60,000 ಎಂದು ಅಂದಾಜಿಸಲಾಗಿದೆ.

ಘಟನೆಯ ಕುರಿತು ಕಂಪನಿಯ ಸೆಕ್ಯೂರಿಟಿಗಳನ್ನು ವಿಚಾರಣೆ ನಡೆಸಿ, ನಂತರ ಮ್ಯಾನೇಜ್ಮೆಂಟ್ ಅನುಮತಿಯೊಂದಿಗೆ ದೂರು ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕಳ್ಳತನವಾದ ಟೈರ್‌ಗಳನ್ನು ಶೀಘ್ರದಲ್ಲೇ ಪತ್ತೆಹಚ್ಚಿ, ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

Related posts