ಸುದ್ದಿ 

ಟೆಲಿಗ್ರಾಂ ಟ್ರೇಡಿಂಗ್ ಗ್ರೂಪ್‌ನಲ್ಲಿ ಹಣ ಲಾಭದ ವಂಚನೆ – ರೂ. 3.4 ಲಕ್ಷ ಮೋಸ

Taluknewsmedia.com

ಬೆಂಗಳೂರು, ಆಗಸ್ಟ್ 5, 2025:

ನಗರದ ನಿವಾಸಿಯೊಬ್ಬರು ಟೆಲಿಗ್ರಾಂನಲ್ಲಿ “ಟ್ರೇಡಿಂಗ್‌ನಲ್ಲಿ ಹೆಚ್ಚಿನ ಲಾಭ” ಎಂಬ ನಂಬಿಕೆಗೆ ಬಿದ್ದು, ಅಪರಿಚಿತ ಖಾತೆಗಳ ಮೂಲಕ ರೂ. 3,40,000 ವಂಚಿತರಾದ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಪಿರ್ಯಾದಿದಾರರು ಅಮೃತಳ್ಳಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಪ್ರಾರಂಭಿಸಲಾಗಿದೆ.

ಪಿರ್ಯಾದಿದಾರರು ತಮ್ಮ ಐಸಿಐಸಿಐ ಬ್ಯಾಂಕ್ ಖಾತೆ ಸಂಖ್ಯೆ – 020401545704 ಮತ್ತು ಇನ್ನಿತರ ಖಾತೆಗಳ ಮೂಲಕ 16-04-2025ರಂದು ಒಟ್ಟು ₹3,40,000 ಹಣವನ್ನು ಟೆಲಿಗ್ರಾಂ ಗ್ರೂಪ್‌ನ ಜನರಿಗೆ ವರ್ಗಾಯಿಸಿದ್ದಾರೆ. ಆರೋಪಿಗಳು ತಾವು ಶೇ. 24ರಷ್ಟು ಲಾಭ ನೀಡುತ್ತೇವೆ ಎಂದು ಭರವಸೆ ನೀಡಿದ್ದರು.

ವಂಚನೆಗಾಗಿ ಬಳಸಲಾದ ಟೆಲಿಗ್ರಾಂ ಖಾತೆಗಳ ಹೆಸರುಗಳು:

@Priya_Gupta8745521

@PrakashNSEtutor2025

@SHVAYA SITA

@FC_1585NSESDAASD

ಹಣವನ್ನು ಈ ಕೆಳಗಿನ ಖಾತೆಗಳಿಗೆ ವರ್ಗಾಯಿಸಲಾಗಿದೆ:

ಖಾತೆ ಸಂಖ್ಯೆ: 308822010000105

ಖಾತೆ ಸಂಖ್ಯೆ: 12428101002315

ಹಣ ವರ್ಗಾಯಿಸಿದ ನಂತರ, ಆನ್‌ಲೈನ್ ಖಾತೆಗಳನ್ನು ಡೀ ಆ್ಯಕ್ಟಿವ್ ಮಾಡಲಾಗಿದೆ ಮತ್ತು ಪಿರ್ಯಾದಿದಾರರ ಸಂಪರ್ಕಕ್ಕೆ ಬರಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಅವರು ಅಮೃತಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು, ಹಣದ ಚಲನವಲನದ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಸೈಬರ್ ಕ್ರೈಂ ವಿಭಾಗಕ್ಕೂ ಮಾಹಿತಿ ಕಳುಹಿಸಲಾಗಿದೆ. ಸಾರ್ವಜನಿಕರು ಈ ರೀತಿಯ ಆನ್‌ಲೈನ್ ಆಫರ್‌ಗಳ ಜಾಲದಲ್ಲಿ ಬೀಳಬಾರದು ಎಂದು ಎಚ್ಚರಿಕೆಯನ್ನು ಸೂಚಿಸಲಾಗಿದೆ.

Related posts