ಸುದ್ದಿ 

13 ವರ್ಷದ ಬಾಲಕಿ ಸಲೋಮಿ ಕಾಣೆಯಾಗಿದ್ದಾರೆ

Taluknewsmedia.com

ಬೆಂಗಳೂರು,ಆಗಸ್ಟ್ 5: ಕೆ.ಜಿ.ಹಳ್ಳಿ ಪ್ರದೇಶದಲ್ಲಿ 13 ವರ್ಷದ ಬಾಲಕಿ ಸಲೋಮಿ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಬಾಲಕಿಯ ತಾಯಿ ಶ್ರೀಮತಿ ಶಾಂತಿ ಅವರು ಠಾಣೆಗೆ ದೂರು ನೀಡಿದ್ದಾರೆ.

ದೂರಿನ ವಿವರದ ಪ್ರಕಾರ, ಸಲೋಮಿ ಕೆ.ಜಿ.ಹಳ್ಳಿಯ ಸರ್ಕಾರಿ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ದಿನಾಂಕ 02-08-2025 ರಂದು ಸಂಜೆ 7:30 ಗಂಟೆಯ ಸುಮಾರಿಗೆ ಮನೆಯಿಂದ ಹೊರಗೆ ಹೋದ ಅವರು ಈವರೆಗೆ ಮನೆಗೆ ಮರಳಿಲ್ಲ.

ಶ್ರೀಮತಿ ಶಾಂತಿ ಅವರು ತಮ್ಮ ಮಗಳನ್ನು ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಪೋಲಿಸಠಾಣೆಗೆ ತಡವಾಗಿ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಸಲೋಮಿಯ ಹಾವಭಾವನೆ, ಉಡುಪುಗಳ ವಿವರ ಹಾಗೂ ಕೊನೆಯ ಬಾರಿ ಕಂಡುಬಂದ ಸ್ಥಳದ ಮಾಹಿತಿ ಆಧರಿಸಿ ಪೊಲೀಸರು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಈ ಹಿಂದೆ ಮನೆಯಿಂದ ಈ ರೀತಿ ಹೋಗಿರುವ ಸಂದರ್ಭಗಳು ಸಂಭವಿಸಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.

ಸಲೋಮಿ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣ ಗಂಗಮ್ಮನ ಗುಡಿ ಪೊಲೀಸ್ ಠಾಣೆಯೊಂದಿಗೆ ಸಂಪರ್ಕ ಸಾಧಿಸಲು ಅಧಿಕಾರಿಗಳು ಸಾರ್ವಜನಿಕರಿಗೆ ವಿನಂತಿಸಿದ್ದಾರೆ.

Related posts