ಮೈಸೂರು ಭೇಟಿಗೆ ಬಂದ ವಿದ್ಯಾರ್ಥಿನಿ ನಾಪತ್ತೆ: ಪೋಷಕರಿಂದ ಪೊಲೀಸ್ ದೂರು
ಬೆಂಗಳೂರು, ಆಗಸ್ಟ್ 6, 2025
ಮೈಸೂರಿಗೆ ಭೇಟಿ ನೀಡಿದ್ದ 22 ವರ್ಷದ ದೀಪು ವಿ.ಎಸ್. ಎಂಬ ವಿದ್ಯಾರ್ಥಿನಿ ನಾಪತ್ತೆಯಾಗಿರುವ ಘಟನೆ ಹೊರಬಿದ್ದಿದ್ದು, ಈ ಕುರಿತು ಹುಡುಗಿಯ ತಂದೆ ಸ್ಥಳೀಯ ಚಿಕ್ಕಜಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹುಣಸಮಾರನಹಳ್ಳಿಯ ನಿವಾಸಿ ದೀಪು ರೇವಾ ಕಾಲೇಜಿನಲ್ಲಿ ಎಂಎಸ್ಸಿ ಪದವಿ ವ್ಯಾಸಂಗ ಮಾಡುತ್ತಿದ್ದರು. ಅವರು ದಿನಾಂಕ 03 ಆಗಸ್ಟ್ 2025 ರಂದು ಮೈಸೂರಿಗೆ ಆಗಮಿಸಿದ್ದರು. ನಂತರ 04 ಆಗಸ್ಟ್ರಂದು ತಮ್ಮ ಗೆಳತಿ ಸಹನ ಜೊತೆ ವಾಸವಾಗಿದ್ದ ಮನೆ ಖಾಲಿ ಮಾಡಿಕೊಂಡಿದ್ದು, ದೀಪು ಅವರನ್ನು ನೋಡಲಾಗದ ಹಿನ್ನೆಲೆಯಲ್ಲಿ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ.
ತಮ್ಮ ಮಗಳು ಸಂದೀಪ್ ಎಂಬ ವ್ಯಕ್ತಿಯೊಂದಿಗೆ ಇದ್ದಿರಬಹುದೆಂಬ ಅನುಮಾನವನ್ನು ತಂದೆ ವ್ಯಕ್ತಪಡಿಸಿದ್ದು, ಸಂಬಂಧಿತ ದೂರವಾಣಿ ಸಂಖ್ಯೆ (☎️ +8618570536) ಕೂಡ ಪೊಲೀಸರಿಗೆ ನೀಡಿದ್ದಾರೆ.
ಕಾಣೆಯಾದ ದೀಪು ವಿ.ಎಸ್ ಅವರ ವೈಶಿಷ್ಟ್ಯಗಳು ಹೀಗಿವೆ –
ವಯಸ್ಸು: 22 ವರ್ಷ
ಧರಿಸಿಕೊಂಡ ಬಟ್ಟೆ: ಕೆಂಪು ಬಣ್ಣದ ಚೂಡಿದಾರ್
ಚಹರೆಗುರುತು: ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಮಂಡು ಮುಖ, ಕಪ್ಪು ಕೂದಲು
ಮಾತನಾಡುವ ಭಾಷೆ: ಕನ್ನಡ, ಹಿಂದಿ, ಇಂಗ್ಲಿಷ್
ಪೋಷಕರು ತಮ್ಮ ಮಗಳನ್ನು ಶೀಘ್ರ ಪತ್ತೆ ಹಚ್ಚಿ ಸುರಕ್ಷಿತವಾಗಿ ಮರಳಿ ತರಬೇಕೆಂದು ಚಿಕ್ಕಜಾಲ ಪೊಲೀಸರಿಗೆ ಮನವಿ ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

