ಸುದ್ದಿ 

ಕಾಲೇಜು ವಿದ್ಯಾರ್ಥಿಯ ಲ್ಯಾಪ್‌ಟಾಪ್‌ ಹಾಗೂ ಮೂಲ ದಾಖಲೆಗಳನ್ನು ಕಳ್ಳತನ ಮಾಡಿದ ಘಟನೆ!

Taluknewsmedia.com

ಬೆಳಗಾವಿ, ಆಗಸ್ಟ್ 6: 2025
ಕರ್ನಾಟಕ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬನ ಲ್ಯಾಪ್‌ಟಾಪ್ ಹಾಗೂ ಅವನ ಸ್ನೇಹಿತನ ಮೂಲ ದಾಖಲಾತಿಗಳನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಘಟನೆ ನಡೆದಿದೆ.

ಪಿರ್ಯಾದಿದಾರರು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಅವರು ತಿಳಿಸಿದಂತೆ, ಆಗಸ್ಟ್ 2 ರಂದು ರಾತ್ರಿ ಸುಮಾರು 3 ಗಂಟೆಗೆ ಅವರು ತಮ್ಮ ರೂಮಿನಲ್ಲಿ ಕೆಲಸ ಮಾಡಿಕೊಂಡು ಲ್ಯಾಪ್‌ಟಾಪ್‌ನ್ನು ಟೇಬಲ್ ಮೇಲೆ ಇಟ್ಟು ಮಲಗಿದ್ದರು. ಆದರೆ ಬೆಳಗ್ಗೆ 7 ಗಂಟೆಗೆ ಎದ್ದಾಗ ಲ್ಯಾಪ್‌ಟಾಪ್ ಕಾಣೆಯಾಗಿತ್ತು. ರೂಮ್ ಲಾಕ್ ಮಾಡದೆ ಮಲಗಿದ್ದುದರಿಂದ ಯಾರೋ ಕಳ್ಳರು ಪ್ರವೇಶಿಸಿ ಲ್ಯಾಪ್‌ಟಾಪ್ ಹಾಗೂ ಬ್ಯಾಗ್‌ನಲ್ಲಿದ್ದ ಹಲವಾರು ಅತ್ಯಂತ ಮಹತ್ವದ ದಾಖಲೆಗಳನ್ನು ಕಳ್ಳತನ ಮಾಡಿದ್ದಾರೆ.

ಕಳ್ಳತನವಾದ ದಾಖಲೆಗಳಲ್ಲಿ ತ್ರಿಪುರ ರಾಜ್ಯ ಶಿಕ್ಷಣ ಇಲಾಖೆಯಿಂದ ಪಡೆದ 5 ರಿಂದ 12ನೇ ತರಗತಿ ನಿಖರ ಪ್ರಮಾಣಪತ್ರಗಳು, ಶಾಲೆ ಬಿಟ್ಟ ದಾಖಲೆಗಳು, ಎಸ್‌ಸಿ ಪ್ರಮಾಣಪತ್ರ, ಜನ್ಮ ಪ್ರಮಾಣಪತ್ರ, ಪಿಆರ್‌ಟಿ ಪ್ರಮಾಣಪತ್ರ, ಬಿ.ಫಾರ್ಮಸಿ ಪರೀಕ್ಷಾ ಹಾಲ್ ಟಿಕೆಟ್, ಎಸ್.ಬಿ.ಐ ಹಾಗೂ ತ್ರಿಪುರ ಗ್ರಾಮೀಣ ಬ್ಯಾಂಕ್ ಪಾಸ್‌ಬುಕ್ ಮತ್ತು ಕಾಲೇಜು ಶುಲ್ಕ ರಶೀದಿಗಳು ಸೇರಿವೆ. ಕಳವಾದ ವಸ್ತುಗಳ ಒಟ್ಟು ಮೌಲ್ಯ ರೂ. 50,000/- ಆಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಸಂಪಿಗೆಹಳ್ಳಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ವಿದ್ಯಾರ್ಥಿಯ ಬಹುಮುಖ್ಯ ದಾಖಲೆಗಳು ಕಳೆದುಹೋಗಿರುವುದರಿಂದ ಈ ಘಟನೆ ಗಂಭೀರವಾಗಿದ್ದು, ಪೊಲೀಸರು ಶೀಘ್ರದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪಿರ್ಯಾದಿದಾರರು ವಿನಂತಿಸಿದ್ದಾರೆ.

Related posts