ಸುದ್ದಿ 

ಆನೇಕಲ್‌ನಲ್ಲಿ ಅಜಾಗರೂಕ ಚಾಲನೆ: ಕಾರು ಡಿಕ್ಕಿಯಿಂದ ವ್ಯಕ್ತಿಗೆ ಗಂಭೀರ ಗಾಯ

Taluknewsmedia.com

ಆನೇಕಲ್, ಆಗಸ್ಟ್ 6 –
ಆನೇಕಲ್ ತಾಲ್ಲೂಕಿನ ಸುಣವಾರ ಗೇಟ್ ಬಳಿ ಕಾರು ಡಿಕ್ಕಿಯಿಂದ ಒಬ್ಬ ವ್ಯಕ್ತಿಗೆ ಗಂಭೀರ ಗಾಯವಾಗಿರುವ ಘಟನೆ ದಿನಾಂಕ 03/08/2025 ರಂದು ಸಂಜೆ ಸಂಭವಿಸಿದೆ. ಈ ಬಗ್ಗೆ ಗಾಯಾಳುವಾದ ದೇವರಾಜು ಅವರ ಪತ್ನಿ ಮುನಿಲಕ್ಷ್ಮಿ ಅವರು ಆನೇಕಲ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಮುನಿಲಕ್ಷ್ಮಿಯವರ ಹೇಳಿಕೆಯಂತೆ, ದಿನಾಂಕ 03ರಂದು ಸಂಜೆ ಸುಮಾರು 7:20 ಗಂಟೆಗೆ ಯಾರೋ ವ್ಯಕ್ತಿ ಕರೆ ಮಾಡಿ ದೇವರಾಜು ಅವರಿಗೆ ಅಪಘಾತವಾಗಿದ್ದು ಅವರು ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ತಕ್ಷಣ ಆಸ್ಪತ್ರೆಗೆ ಧಾವಿಸಿದ ಮುನಿಲಕ್ಷ್ಮಿಯವರಿಗೆ, ಈ ಘಟನೆ ನಿಜವಾಗಿರುವುದು ತಿಳಿದು ಬಂದಿದೆ.

ಅಪಘಾತದ ವಿವರವನ್ನು ದೇವರಾಜು ತಿಳಿಸುತ್ತಾ, ಅವರು ಕೆಲಸ ಮುಗಿಸಿಕೊಂಡು ಸುಣವಾರ ಗೇಟ್ ಬಳಿ ಬಾರ್ ಎದುರಿನಿಂದ ನಡೆದುಕೊಂಡು ಮನೆಗೆ ತೆರಳುತ್ತಿದ್ದಾಗ, ಕೆಎ 51 ಎಂ ಎಲ್ 2982 ಎಂಬ ನಂಬರಿನ ಕಾರು, ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಿಸಿ, ಅವರನ್ನು ಡಿಕ್ಕಿ ಹೊಡೆದು ಅಪಘಾತ ಉಂಟುಮಾಡಿದೆ. ಡಿಕ್ಕಿಯಿಂದ ದೇವರಾಜು ಬಲಗೈ ಮೂಳೆ ಮುರಿದು, ಮುಖ ಮತ್ತು ಬೆರಳುಗಳಿಗೆ ಪೆಟ್ಟುಗಳನ್ನು ಪಡೆದು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಪಘಾತದ ನಂತರ ಚಾಲಕ ಕಾರನ್ನು ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳೀಯರ ಸಹಾಯದಿಂದ ದೇವರಾಜು ಅವರನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹೆಚ್ಚಿನ ಚಿಕಿತ್ಸೆಗೆ ಅವರನ್ನು ಆನೇಕಲ್ ಟೌನ್‌ನ ಕೇರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಈ ಕುರಿತು ದೇವರಾಜು ಅವರ ಪತ್ನಿ ಮುನಿಲಕ್ಷ್ಮಿ ಅವರು ಅಪಘಾತ ಉಂಟುಮಾಡಿದ ಕಾರು ಮತ್ತು ಚಾಲಕನನ್ನು ಪತ್ತೆಹಚ್ಚಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರಿದಿದೆ.

Related posts