ಮಧ್ಯರಾತ್ರಿ ಕಾರು-ಸ್ಕೂಟರ್ ಅಪಘಾತ: ಸ್ಕೂಟರ್ ಸವಾರನಿಗೆ ಗಾಯ
ಬೆಂಗಳೂರು, ಆ.6 – ನಗರದ ಜಕ್ಕೂರು ಪ್ರದೇಶದಿಂದ ಬ್ಯಾಟರಾಯನ ಜಂಕ್ಷನ್ ಕಡೆಗೆ ಸಾಗುತ್ತಿದ್ದ ಕಾರು ಮಧ್ಯರಾತ್ರಿ ಅಪಘಾತಕ್ಕೀಡಾಗಿ ಒಂದು ಸ್ಕೂಟರ್ ಡಿಕ್ಕಿಯಾದ ಪರಿಣಾಮ, ಸ್ಕೂಟರ್ ಸವಾರನಿಗೆ ಗಾಯವಾಗಿರುವ ಘಟನೆ ನಡೆದಿದೆ.
ದಿನಾಂಕ 05.08.2025 ರಂದು ರಾತ್ರಿ 12:48 ಗಂಟೆ ಸುಮಾರಿಗೆ, ತಮ್ಮ ಸ್ನೇಹಿತರು ಅಶಿಕಾ ಕ್ರಿಪಾಲ್, ಗೌತಮ್ ಜಿ, ರಿತಿಕಾ ಮತ್ತು ಶ್ರೀನಾಥ್ ರವರೊಂದಿಗೆ ತಮ್ಮ ಕಾರು (ನಂಬರ್: KA.05 NN.9317) ಯಲ್ಲಿ ಪ್ರಯಾಣಿಸುತ್ತಿದ್ದರು. ಅವರು ಕೆಂಪು ಸಿಗ್ನಲ್ ಬಂದ ಹಿನ್ನೆಲೆಯಲ್ಲಿ ಕಾರನ್ನು ನಿಲ್ಲಿಸಿದ್ದರು.
ಆ ಸಮಯದಲ್ಲಿ ಹಿಂದಿನಿಂದ ಬಂದ ಎಲೆಕ್ಟ್ರಿಕ್ ಸ್ಕೂಟರ್ (ವಾಹನ ನಂಬರ್: KA.04.KR.9499) ನ ಸವಾರನು ತನ್ನ ವಾಹನವನ್ನು ಅತೀವ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ, ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಕಾರಿನ ಹಿಂಭಾಗದ ಭಾಗ ಜಖಂಗೊಂಡಿದ್ದು, ಸ್ಕೂಟರ್ ಕೂಡ ಹಾನಿಗೊಳಗಾಗಿದೆ.
ಸ್ಕೂಟರ್ ಸವಾರನ ಮುಖಕ್ಕೆ ಗಾಯವಾಗಿದ್ದು, ಸಾರ್ವಜನಿಕರ ಸಹಾಯದಿಂದ ಆತನನ್ನು ತಕ್ಷಣದಲ್ಲೇ ಪೋಲೈಫ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನಂತರ ಘಟನೆ ಬಗ್ಗೆ ಪೊಲೀಸರು ಮಾಹಿತಿ ಪಡೆದುಕೊಂಡಿದ್ದು, ಅಪಘಾತಕ್ಕೆ ಕಾರಣವಾಗಿದ್ದ ಸ್ಕೂಟರ್ ಸವಾರನ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ದೂರು ನೀಡಿದ್ದಾರೆ.

