ಸುದ್ದಿ 

ಆನೆಕಲ್‌ನಲ್ಲಿ ನಕಲಿ ಸಿಗರೇಟ್ ಮಾರಾಟ – ITC ಕಂಪನಿ ಪ್ರತಿನಿಧಿಯಿಂದ ದೂರು

Taluknewsmedia.com

ಆನೆಕಲ್, ಆ. 9 – ಆನೆಕಲ್ ತಾಲೂಕಿನ ತಾಳಿ ರಸ್ತೆಯಲ್ಲಿರುವ ಒಂದು ಪ್ರೊವಿಷನ್ ಅಂಗಡಿಯಲ್ಲಿ ನಕಲಿ ಸಿಗರೇಟ್ ಮಾರಾಟವಾಗುತ್ತಿರುವ ಬಗ್ಗೆ ITC ಕಂಪನಿಯ ಅಧಿಕೃತ ಪ್ರತಿನಿಧಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮುರಗನ್ ಬಿನ್ ತಂಗಮಣಿ ಅವರು 30 ಮೇ 2025ರ ಅಧಿಕಾರ ಪತ್ರದ ಆಧಾರದಲ್ಲಿ ಕಂಪನಿಯ ಪರವಾಗಿ ನಕಲಿ ಸಿಗರೇಟ್‌ಗಳ ಪತ್ತೆ, ದೂರು ಹಾಗೂ ಕಾನೂನು ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿದ್ದಾರೆ. ITC ಕಂಪನಿ Insignia, India Kings, Gold Flake, Wills Navy Cut, Players ಸೇರಿದಂತೆ ಹಲವು ಪ್ರಸಿದ್ಧ ಬ್ರ್ಯಾಂಡ್‌ಗಳ ಮಾಲೀಕತ್ವ ಹೊಂದಿದೆ.

ಆಗಸ್ಟ್ 8 ಮತ್ತು 9 ರಂದು, ಮುರುಗನ್ ರವರು ಹಾಗೂ ಕಂಪನಿಯ ತನಿಖಾಧಿಕಾರಿ ಮಣಿಮಾರನ್ ಅವರು ಆನೆಕಲ್ ಟೌನ್ ತಾಳಿ ರಸ್ತೆಯಲ್ಲಿರುವ K.L.S Provision Store ನಲ್ಲಿ Kings ಮತ್ತು Kings Lights ಬ್ರ್ಯಾಂಡ್‌ನ ಸಿಗರೇಟ್‌ಗಳನ್ನು ಖರೀದಿಸಿದ್ದು, ಅವು ನಕಲಿ ಎಂಬುದು ದೃಢಪಟ್ಟಿದೆ.

ಇದಲ್ಲದೆ, ನಕಲಿ ಸಿಗರೇಟ್‌ಗಳನ್ನು ಪೂರೈಸುತ್ತಿರುವ ಹೋಲ್ಸೇಲ್ ವ್ಯಾಪಾರಿ ಮುನಿರಾಜು ಎಂಬವರ ಬಗ್ಗೆ ವಿಶ್ವಾಸಾರ್ಹ ಮಾಹಿತಿ ದೊರೆತಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ನೀಡಲಾಗಿದೆ.

Related posts