ವಿಶಾಲ ಮೆಡಿಕಲ್ ಬಳಿ ಸ್ಕೂಟರ್-ಲಾರಿ ಡಿಕ್ಕಿ – ಯುವಕ ಗಂಭೀರವಾಗಿ ಗಾಯ
ಬೆಂಗಳೂರು: ನಗರದ ಸಿ.ಬಿ.ಐ ಮುಖ್ಯ ರಸ್ತೆಯ ವಿಶಾಲ ಮೆಡಿಕಲ್ ಹತ್ತಿರ ನಡೆದ ರಸ್ತೆ ಅಪಘಾತದಲ್ಲಿ 20 ವರ್ಷದ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಪೊಲೀಸರ ಪ್ರಕಾರ, ಆಗಸ್ಟ್ 7ರಂದು ರಾತ್ರಿ ಸುಮಾರು 9.30ರ ವೇಳೆಗೆ ಹಿತೇಶ್ ಎಂ (20) ಸ್ಕೂಟರ್ (KA-41-HB-7777) ನಲ್ಲಿ ಸಂಚರಿಸುತ್ತಿದ್ದಾಗ, ಹಿಂದೆ ಬಂದ ಸಿಮೆಂಟ್ ಲಾರಿ (KA-51-A-8939) ವೇಗವಾಗಿ ಬಂದು ಸ್ಕೂಟರ್ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.
ಡಿಕ್ಕಿಯಿಂದ ಹಿತೇಶ್ ರಸ್ತೆ ಮೇಲೆ ಬಿದ್ದು ಎಡ ಕಾಲಿಗೆ ತೀವ್ರ ಪೆಟ್ಟಾಗಿದ್ದು, ಸ್ಕೂಟರ್ ಕೂಡ ಜಖಂಗೊಂಡಿದೆ. ಅಪಘಾತದ ನಂತರ, ಲಾರಿ ಚಾಲಕನೇ ಗಾಯಾಳುವನ್ನು ಸ್ಥಳೀಯರ ಸಹಾಯದಿಂದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಕರೆದೊಯ್ದು ಒಳರೋಗಿಯಾಗಿ ದಾಖಲಿಸಿದ್ದಾನೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಲಾರಿ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.

