ಸುದ್ದಿ 

ಟೆಲಿಗ್ರಾಂ ಮೂಲಕ ಆನ್‌ಲೈನ್ ವಂಚನೆ – ₹1.00 ಲಕ್ಷಕ್ಕೂ ಹೆಚ್ಚು ನಷ್ಟ

Taluknewsmedia.com

ಬೆಂಗಳೂರು ಆಗಸ್ಟ್ 11 2025
ಟೆಲಿಗ್ರಾಂ ಆಪ್ ಮೂಲಕ ಪಾರ್ಟ್‌ಟೈಮ್ ಕೆಲಸದ ಆಫರ್ ನೀಡಿ ವ್ಯಕ್ತಿಯಿಂದ ಲಕ್ಷಕ್ಕೂ ಹೆಚ್ಚು ರೂಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.

28 ಜುಲೈ 2025ರಂದು ಬೆಳಿಗ್ಗೆ ಸುಮಾರು 10 ಗಂಟೆಯ ಸುಮಾರಿಗೆ paxfun.com ಹೆಸರಿನ ಖಾತೆಯಿಂದ ದೂರುದಾರರಿಗೆ “ಪಾರ್ಟ್‌ಟೈಮ್ ಜಾಬ್” ಕುರಿತು ಸಂದೇಶ ಬಂತು. ಗೂಗಲ್‌ನಲ್ಲಿ ವಿಮರ್ಶೆ (ರಿವ್ಯೂ) ಮಾಡಿದರೆ ಹಣ ನೀಡುವುದಾಗಿ ಭರವಸೆ ನೀಡಲಾಗಿತ್ತು. ಪ್ರಾರಂಭದಲ್ಲಿ 100 ರೂ. ದೂರುದಾರರ ಖಾತೆಗೆ ಜಮಾ ಮಾಡಲಾಯಿತು.

ನಂತರ ಹೆಚ್ಚಿನ ಆದಾಯಕ್ಕಾಗಿ ಹಣ ಹಾಕಬೇಕೆಂದು ಒತ್ತಾಯಿಸಿ, hariom1427@axl, akkhankhan1119-2@okicici, yogeshendge@oksbi, bshshsvsgs@upi, ಹಾಗೂ 9951649166@rapl ಖಾತೆಗಳಿಗೆ ಒಟ್ಟು ₹1,00,500 ವರ್ಗಾಯಿಸಲಾಯಿತು.

ಮತ್ತೆ ಹಣ ಹಾಕುವಂತೆ ಒತ್ತಾಯಿಸಿದಾಗ ವಂಚನೆ ನಡೆದಿದೆ ಎಂಬುದು ತಿಳಿದುಬಂದಿದ್ದು, ಗಣಪತಿ ಭಟ್ ಅವರು ತಕ್ಷಣವೇ ಕೊಡಿಗೆಹಳ್ಳಿ ಪೊಲೀಸ್ ಠಾಣೆಗೆ ಹಾಜರಾಗಿ ದೂರು ದಾಖಲಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

Related posts