ಮದುವೆ ಸಮಾರಂಭದಲ್ಲಿ ಬಾಲಕನ ಮೇಲೆ ಹಲ್ಲೆ, ಪ್ರಾಣ ಬೆದರಿಕೆ
ಬೆಂಗಳೂರು:11 2025
ನಗರದ ಫಣಿಸಂದ್ರ ಪ್ರದೇಶದಲ್ಲಿರುವ ಕ್ರಿಸ್ಟಲ್ ಪ್ಯಾವೆನ್ ಆವರಣದಲ್ಲಿ ನಡೆದ ಮದುವೆ ಸಮಾರಂಭದಲ್ಲಿ 13 ವರ್ಷದ ಬಾಲಕನ ಮೇಲೆ ಹಲ್ಲೆ ನಡೆದ ಘಟನೆ ಬೆಳಕಿಗೆ ಬಂದಿದೆ.
ಸಂಪಿಗೆಹಳ್ಳಿ ಪೊಲೀಸರ ಮಾಹಿತಿಯ ಪ್ರಕಾರ, ಜುಲೈ 15ರಂದು ರಾತ್ರಿ ಮದುವೆ ಕಾರ್ಯಕ್ರಮದ ವೇಳೆ ಹಣ್ಣಿನ ಸ್ಟಾಲ್ ಬಳಿ ನಿಂತಿದ್ದ ಬಾಲಕನಿಗೆ ಬಿನ್ ರಷೀದ್ ಖಾನ್ (31) ಎಂಬುವವರು ಅವಾಚ್ಯ ಶಬ್ದಗಳಿಂದ ಬೈದು, ಮುಷ್ಟಿಯಿಂದ ತಲೆಗೆ ಮತ್ತು ಹೊಟ್ಟೆಗೆ ಹೊಡೆದು, ಚಾಕುವಿನಿಂದ ಚುಚ್ಚಲು ಯತ್ನಿಸಿದರೆಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಯ ನಂತರ ಬಾಲಕನನ್ನು ತಕ್ಷಣವೇ ಹತ್ತಿರದ ಡಾ. ಬಿ.ಆರ್. ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ನಂತರ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಯಿತು. ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ.

